ಮಂಗಳೂರಿನ ಪ್ರಸಿದ್ಧ ವೈದ್ಯೆಯದ್ದು ಎನ್ನಲಾದ ‘ಬೆದರಿಕೆ ಮತಾಂತ’ರ ಆಡಿಯೋ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಮಂಗಳೂರು:
ಮನೆಗೆಲಸಕ್ಕಿದ್ದ ಹಿಂದು ಯುವತಿ ಯನ್ನು ಇಸ್ಲಾಂಗೆ ಮತಾಂತರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿರುವ ನಡುವೆಯೇ  ಮತಾಂತರಗೊಂಡಿರುವ ಆಯಿಷಾ ಮತ್ತು ಡಾ. ಜಮೀಲಾ ಅವರದ್ದೆನ್ನಲಾದ ಆಡಿಯೋವೊಂದು ವೈರಲ್ ಆಗುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.
ಏನಿದೆ ಆಡಿಯೋದಲ್ಲಿ?:
ವೈರಲ್ ಆಗಿರುವ ಆಡಿಯೋದಲ್ಲಿ ಡಾ. ಜಮೀಲಾ ಎನ್ನಲಾದವರು  ಮತಾಂತರಕ್ಕೊಳಗಾಗಿರುವ ಆಯಿಷಾಗೆ ಬೆದರಿಕೆ ಒಡ್ಡುವ ಮಾತುಗಳು ಕೇಳಿ ಬಂದಿವೆ. ಇಸ್ಲಾಂಗೆ ಮತಾಂತರವಾಗಲು ಒತ್ತಾಯ ಮಾಡಿ ರುವ ಕುರಿತಂತೆ ದೂರು ನೀಡಿದ ಹಿಂದು ಯುವತಿಗೆ  ಜಮೀಲಾ ಮೂರು ದಿವಸಗಳ ಹಿಂದೆ ಮುಸ್ಲಿಂ ಭಾಷೆಯಲ್ಲಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಸಂಘಟನೆಗಳ ಖಂಡನೆ:
ಮತಾಂತರ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್, ದುರ್ಗಾವಾಹಿನಿ ಮತ್ತು ಬಜರಂಗದಳ ತೀವ್ರವಾಗಿ ಖಂಡಿಸಿದೆ. ಹಿಂದು ಯುವತಿಯನ್ನು ಇಸ್ಲಾಂಗೆ  ಮತಾಂತರಗೊಳಿಸಿದ ಷಡ್ಯಂತ್ರವನ್ನು ದುರ್ಗಾವಾಹಿನಿ ಖಂಡಿಸುತ್ತದೆ. ಇದಕ್ಕೆ ಕಾರಣಕರ್ತರಾದವರ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳನ್ನು ಕೂಡಲೇ ಬಂಧಿಸಿ , ಕಠಿಣ ಕ್ರಮ ಕೈಗೊಳ್ಳಬೇಕಾಗಿ ದುರ್ಗಾವಾಹಿನಿ ಆಗ್ರಹಿಸುತ್ತದೆ ಎಂದು  ಮಾತೃ ಶಕ್ತಿ ವಿಭಾಗದ ಪ್ರಧಾನ ಸಹ ಸಂಯೋಜಕಿ ಸುರೇಖಾರಾಜ್ ತಿಳಿಸಿದ್ದು, ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ.
ತನಿಖೆ ಆರಂಭ:
ಇಸ್ಲಾಂಗೆ ಮತಾಂತರಗೊಂಡ ಹಿಂದು ಯುವತಿಯ ಆರೋಪದ ಮೇರೆಗೆ  ಈಗಾಗಲೇ  ಮೂರು ಮಂದಿಯ ವಿರುದ್ಧ ಪಾಂಡೇಶ್ವರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಖಲೀಲ್ ಎಂಬಾತ ಕೆಲಸ ಹಾಗೂ ಹಣದ ಆಮಿಷವೊಡ್ಡಿ ಮತಾಂತರ ಮಾಡಿದ್ದಲ್ಲದೆ ಜೀವ ಬೆದರಿಕೆ ಒಡ್ಡಿರುವುದಾಗಿ ನೊಂದ ಯುವತಿ ಠಾಣೆಗೆ ದೂರು ನೀಡಿದ್ದಾಳೆ. ಮೊಬೈಲ್ ರಿಚಾರ್ಜ್‌ಗೆ ಅಂಗಡಿಗೆ ಬರುತ್ತಿದ್ದ ಯುವತಿಗೆ  ಕೆಲಸ ನೀಡುವುದಾಗಿ ಪುಸಲಾಯಿಸಿದ ಅನ್ಯಕೋಮಿನ ಬೂತ್ ಮಾಲೀಕ ಖಲೀಲ್ ಎಂಬಾತ ಕಲ್ಲಾಪಿನ ತನ್ನ ಕುಟುಂಬಸ್ಥರಲ್ಲಿ ಮನೆ ಕೆಲಸಕ್ಕೆ ಸೇರಿಸಿದ್ದ. ಅಲ್ಲಿ ಆಕೆಯನ್ನು ಮತಾಂತರಗೊಳ್ಳುವಂತೆ ಕುಟುಂಬಸ್ಥರು ಒತ್ತಾಯಿಸಿದ್ದರಲ್ಲದೆ ಬುರ್ಖಾ ಧರಿಸುವಂತೆ ಒತ್ತಡ ಹೇರುತ್ತಿದ್ದರು. ‘ನಿತ್ಯ ನಮಾಜ್‌ಗೆ ಒತ್ತಾಯಿಸುತ್ತಿದ್ದರು. ಬಳಿಕ ಹೆಸರನ್ನೂ ಆಯಿಷಾ ಆಗಿ ಬದಲಾಯಿಸಿದ್ದರು’ ಎಂದು ನೊಂದ ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!