ಭಾರತ್ ಜೋಡೋ ಯಾತ್ರೆಯಲ್ಲಿ ಎನ್‌ಫೀಲ್ಡ್ ಏರಿ ಸಾಗಿದ ರಾಗಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿತ್ಯ ಒಂದಲ್ಲಾ ಒಂದು ವಿಚಾರಗಳಿಂದ ಸುದ್ದಿ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಈಗ ಮಧ್ಯಪ್ರದೇಶದಲ್ಲಿ ಮುಂದುವರಿದಿದೆ.
ಭಾನುವಾರ ರಾಹುಲ್ ಗಾಂಧಿ ಎನ್‌ಫೀಲ್ಡ್ ಬೈಕ್ ಸವಾರಿ ಮಾಡುವ ಮೂಲಕ ಸುದ್ದಿಮಾಡಿದ್ದಾರೆ.
ಭಾರತ್ ಜೋಡೋ ಪಾದಯಾತ್ರೆ ವೇಳೆ ಬೈಕ್ ಸವಾರಿಯಲ್ಲಿದ್ದ ರಜತ್ ಪಾರಾಶರ್ ಹಾಗೂ ಸಾರ್ಥಕ್ ಎಂಬವರನ್ನು ಭೇಟಿಯಾದ ರಾಹುಲ್, ಅವರೊಂದಿಗೆ ಒಂದಿಷ್ಟು ಕಾಲ ಕುಶಲೋಪರಿ ನಡೆಸಿ ತಾವೂ ಬೈಕ್ ಏರಿ ಒಂದಿಷ್ಟು ದೂರ ತೆರಳಿದರು. ಬಳಿಕ ಅವರೊಂದಿಗಿದ್ದ ಜರ್ಮನ್ ಶೆಫರ್ಡ್ ಶ್ವಾನದೊಂದಿಗೆ ಕೂಡಾ ರಾಗಾ ಒಂದಿಷ್ಟು ಸಮಯ ಕಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!