ಗೇಟಿನ ಚಿಲಕಕ್ಕೊಂದು ಸಿಂಪಲ್ ಐಡಿಯಾ- ವಿಡಿಯೊ ಟ್ರೆಂಡ್ ಆಯ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರತಿಯೊಂದು ವಲಯದಲ್ಲೂ ಹೊಸ ಹೊಸ ವಿನ್ಯಾಸ, ತಂತ್ರಜ್ಞಾನ ಹೊರಬರುತ್ತಲೇ ಇರುತ್ತವೆ. ಅದರಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಗೇಟಿನ ಚಿಲಕದ ತಂತ್ರಜ್ಞಾನ ಬೆಳಕಿಗೆ ಬಂದಿದೆ. ಹೌದು ನಿಮ್ಮ ಗೇಟ್‌ ಕ್ಲೋಸ್‌ ಮಾಡಲು ದೊಡ್ಡ ದೊಡ್ಡ ಬೀಗ ಬೇಕಿಲ್ಲ. ಅಥವಾ ಆಟೋಮೆಟಿಕ್‌ ಲಾಕ್‌ ಅವಶ್ಯಕತೆಯಿಲ್ಲ ಗೇಟ್‌ ಲಾಕ್‌ ಮಾಡಲು ಒಂದು ಕಬ್ಬಿಣದ ರಿಂಗ್‌ ಸಾಕು.

ವೈರಲ್‌ ಆಗಿರುವ ವಿಡಿಯೋದಲ್ಲಿ ಯೂ ಶೇಪ್‌ನಲ್ಲಿರುವ ಒಂದು ಕಬ್ಬಿಣದ ತುಂಡನ್ನು ಅಳವಡಿಸಿ, ಅದರ ಮಧ್ಯಕ್ಕೊಂದು ರಿಂಗ್‌ ಹಾಕಿದರೆ ಲಾಕ್‌ ರೆಡಿ. ಈ ವಿಡಿಯೋ ನೋಡಿ ನೀವೂ ನಿಮ್ಮ ಮನೆಯ ಗೇಟಿನ ಚಿಲಕಕ್ಕೆ ಈ ಸಿಂಪಲ್‌ ಐಡಿಯಾ ಬಳಸಬಹುದು. ಈ ಐಡಿಯಾಗೆ ನೆಟ್ಟಿಗರು ಫಿದಾ ಆಗಿದ್ದು, ವಾಟ್‌ ಆನ್‌ ಐಡಿಯಾ ಅಂತಿದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!