ನಿಮಗೆ ಪಿಸಿಒಡಿ ಸಮಸ್ಯೆ ಇದ್ಯಾ? ಹಾಗಿದ್ರೆ ನಿಮ್ಮ ಆಹಾರ ಕ್ರಮ ಹೀಗಿರಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸರಿಯಾದ ಸಮಯಕ್ಕೆ ಪೀರಿಯಡ್ಸ್‌ ಆಗದಿರುವ ಎಷ್ಟೋ ಮಹಿಳೆಯರಲ್ಲಿ ಕಾಡುವ ಸಾಮಾನ್ಯ ಕಾಯಿಲೆ ಪೊಲಿಸಿಸ್ಟಿಕ್‌ ಓವರ್‌ ಸಿಂಡ್ರೋಮ್ (ಪಿಸಿಒಡಿ). ಪಿಸಿಒಡಿಗೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಆಹಾರ ಕ್ರಮ ಪಾಲಿಸಿ…

  • ಮಾಂಸಾಹಾರ ಹಾಗೂ ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್‌ ಹಾಗೂ ಕ್ಯಾಲೊರೀ ಹೆಚ್ಚಾಗುತ್ತದೆ.
  • ನಿಮ್ಮ ಆಹಾರದಲ್ಲಿ ಫೈಬರ್‌ ನ ಅಂಶ ಹೆಚ್ಚಾಗಿರಲಿ.
  • ಹೆಚ್ಚು ಹಸಿರು ತರಕಾರಿ, ಹಣ್ಣುಗಳನ್ನು ಸೇವಿಸಿ. ಇದರಲ್ಲಿ ಹೆಚ್ಚು ನ್ಯೂಟ್ರಿಯಂಟ್ಸ್‌ ಹಾಗೂ ಆಂಟಿ ಆಕ್ಸಿಡೆಂಟ್‌ ಇರಲಿದೆ.
  • ಒಂದೇ ಸಮಯಕ್ಕೆ ಹೆಚ್ಚು ಆಹಾರ ಸೇವಿಸಬೇಡಿ. ಬದಲಿಗೆ ಆಗಾಗ ಸ್ವಲ್ಪ ಆಹಾರ ಸೇವಿಸೋದು ಉತ್ತಮ.
  • ಅಗಸೆ ಬೀಜ, ಎಳ್ಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
  • ಫಿಸಿಕಲಿ ಆಕ್ಟೀವ್‌ ಆಗಿರಿ. ಯೋಗ, ವ್ಯಾಯಾಮ ಮಾಡಿ. ಇದರಿಂದ ಒತ್ತಡ ಕಡಿಮೆಯಾಗುತ್ತೆ.
  • ಓಟ್ಸ್‌, ಮಲ್ಟಿ ಗ್ರೈನ್‌ ಬ್ರೆಡ್‌, ಚನ್ನಾ, ಸೌತೆಕಾಯಿ, ಟೊಮಾಟೊ ಗಳನ್ನು ಸೇವಿಸಿ.
  • ಬೆರ್ರಿ, ಕಿತ್ತಳೆ, ಪೀಚ್‌, ಪಪಾಯ, ಪೀಯರ್ಸ್‌, ಕಲ್ಲಂಗಡಿ, ಸೇಬು ಉತ್ತಮ.
  • ಡಾರ್ಕ್‌ ಚಾಕೊಲೇಟ್‌, ಬಾದಾಮಿ, ಪಿಸ್ತಾ ಕೂಡ ಒಳ್ಳೆಯದು.

ಯಾವುದು ಸೇವಿಸಬಾರದು:

  • ಕಾರ್ಬೋಹೈಟ್ರೇಟ್ಸ್‌ ಇರುವ ಆಹಾರ, ವೈಟ್‌ ಬ್ರೆಡ್‌, ಪೇಸ್ಟರೀ
  • ಕರಿದ ತಿನಿಸುಗಳು
  • ಸಕ್ಕರೆ ಪದಾರ್ಥ, ಸೋಡಾ, ಎನರ್ಜಿ ಡ್ರಿಂಕ್ಸ್‌
  • ರೆಡ್‌ ಮೀಟ್‌, ಹ್ಯಾಂಬರ್ಗರ್‌

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!