ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಡಬದಿಯಲ್ಲಿ ಮಲಗುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೊಟ್ಟೆಯ ಎಡಭಾಗದಲ್ಲಿ ಜೀರ್ಣಾಂಗ ವ್ಯವಸ್ಥೆ ಜೊತೆಗೆ ಮೇದೋಜೀರಕ ಗ್ರಂಥಿಯೂ ಇದೆ. ಎಡಗಡೆ ಮಲಗಿರುವಾಗ ಗುರುತ್ವಾಕರ್ಷಣಾ ಶಕ್ತಿ ನೇತಾಡುತ್ತಿರುವಂತೆ ಭಾಸವಾಗುತ್ತದೆ. ಆಗ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ತುಂಬಾ ಸಕ್ರಿಯವಾಗಿ ನಡೆಯುತ್ತದೆ. ಅಷ್ಟೇ ಅಲ್ಲ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ದುಗ್ಧರಸ ವ್ಯವಸ್ಥೆಯನ್ನು ಉತ್ತೇಜಿಸಲಾಗುತ್ತದೆ. ಮಧ್ಯಾಹ್ನದ ಊಟದ ನಂತರ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಎಡಭಾಗದಲ್ಲಿ ಮಲಗುವುದು ಉತ್ತಮ.
ಇನ್ನೊಂದು ವಿಷಯವೆಂದರೆ ಹೃದಯವೂ ಎಡಭಾಗದಲ್ಲಿದೆ. ಎಡಭಾಗದಲ್ಲಿ ತಿರುಗಿ ಮಲಗಿದರೆ, ರಕ್ತ ಸಂಚಾರವೂ ಚೆನ್ನಾಗಿ ಆಗುತ್ತದೆ. ಹೃದಯಕ್ಕೆ ಸಿಗುವ ಒತ್ತಡ ಕಡಿಮೆಯಾಗುತ್ತದೆ. ಗರ್ಭಿಣಿಯರು ಎಡಗಡೆ ಮಲಗುವುದರಿಂದ ಪೋಷಕಾಂಶಗಳು ನೇರವಾಗಿ ಮಗುವಿಗೆ ಲಭ್ಯವಾಗುತ್ತದೆ. ಜೊತೆಗೆ ಭ್ರೂಣ ಮತ್ತು ಗರ್ಭಾಶಯಕ್ಕೆ ರಕ್ತ ಸಂಚಾರ ಉತ್ತಮವಾಗಿರುತ್ತದೆ. ಹೀಗೆ ಮಲಗುವುದರಿಂದ ಬೆನ್ನುಮೂಳೆಯ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ಒಳ್ಳೆಯ ನಿದ್ದೆ ಬರುತ್ತದೆ. ಆಯುರ್ವೇದ ವೈದ್ಯರು ಹೇಳುವ ಪ್ರಕಾರ ಗರ್ಭಿಣಿಯರು ತಮ್ಮ ಎಡಬದಿಯಲ್ಲಿ ಆದಷ್ಟು ಹೊತ್ತು ಮಲಗುವುದು ಉತ್ತಮ.