ಭಗವದ್ಗೀತೆ ಇಡೀ ಮನುಕುಲದ ಪ್ರಗತಿಗೆ ಮಾರ್ಗದರ್ಶನ ನೀಡುವ ಗ್ರಂಥ: ಶ್ರೀ ಚಿದ್ರೂಪಾನಂದ ಮಹಾಸ್ವಾಮಿ

ಹೊಸದಿಗಂತ ವರದಿ, ಅಂಕೋಲಾ:

ಪವಿತ್ರ ಭಗವದ್ಗೀತೆ ಯಾವುದೇ ಒಂದು ಧರ್ಮಕ್ಕೆ ಇಡೀ ಮನುಕುಲದ ಪ್ರಗತಿಗೆ ಮಾರ್ಗದರ್ಶನ ಮಾಡುವ ಗ್ರಂಥವಾಗಿದ್ದು ಭಗವದ್ಗೀತೆಯನ್ನು ತಿಳಿದುಕೊಳ್ಳುವುದರಿಂದ ಜೀವನದಲ್ಲಿ ಅತ್ಯವಶ್ಯಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಹುಬ್ಬಳ್ಳಿ ಆರ್ಷ ವಿದ್ಯಾಪೀಠದ ಶ್ರೀ ಚಿದ್ರೂಪಾನಂದ ಮಹಾಸ್ವಾಮಿಗಳು ನುಡಿದರು.
ಶ್ರೀರಾಮ ಜಪಯಜ್ಞ ಮಹಾಮಂಡಳಿ ಪುರ್ಲಕ್ಕಿಬೇಣ ಅಂಕೋಲಾ ಇವರ ಆಶ್ರಯದಲ್ಲಿ ಶ್ರೀರಾಮನವಮಿ ಅಂಗವಾಗಿ ಶಾಂತಾದುರ್ಗಾದೇವಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ
ಭಗವದ್ಗೀತೆ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು ಸಮಸ್ಥ ಮನುಕುಲವನ್ನು ಹೃದಯದಲ್ಲಿಟ್ಟು ಪ್ರೀತಿಸುವಂತೆ ಭಗವದ್ಗೀತೆ ಹೇಳುತ್ತದೆ ಎನ್ನುವುದು ತಿಳಿದುಕೊಳ್ಳುವ ಅಗತ್ಯತೆ ಇದೆ ಎಂದರು.
ಬದುಕಿನಲ್ಲಿ ಸಾರ್ಥಕತೆ ಹೊಂದಲು ಭಗವದ್ಗೀತೆಯ ಸಾರದ ಜ್ಞಾನ ಇರುವುದು ಅತ್ಯಗತ್ಯ ಎಂದ ಅವರು ಇಂದು ಮನುಷ್ಯ ಅಜ್ಞಾನದಿಂದ ಮೋಕ್ಷವನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದು ಅಂತರಾತ್ಮವನ್ನು ಹುಡುಕಿದರೆ ಎಲ್ಲವೂ ಅಲ್ಲೇ ಸಿಗುವುದು ಅದಕ್ಕಾಗಿ ಭಗವದ್ಗೀತೆಯ ಅಧ್ಯಯನ ಇಂದಿನ ದಿನಗಳಲ್ಲಿ ಅತ್ಯಂತ ಪ್ರಸ್ತುತವಾಗಿದೆ ಎಂದರು.
ವೇದಗಳ ಕಾಲದಲ್ಲಿ ಧರ್ಮಶಾಸ್ತ್ರ ಎಷ್ಟು ಮುಖ್ಯವಾಗಿತ್ತೋ ಇಂದು ಸಂವಿಧಾನ ಕೂಡ ಅಷ್ಟೇ ಪ್ರಾಮುಖ್ಯತೆ ಹೊಂದಿದ್ದು ಭಗವದ್ಗೀತೆಯಲ್ಲಿ ಧರ್ಮಶಾಸ್ತ್ರ ಮತ್ತು ಸಂವಿಧಾನದ ಆಶಯಗಳು ಒಳಗೊಂಡಿದ್ದು ಧರ್ಮ ಸಂರಕ್ಷಣೆಗಾಗಿ ಕಾಲಕ್ಕೆ ತಕ್ಕಂತೆ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ ಎಂದು ಅವರು ಹೇಳಿದರು.
ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಅನುರಾಧಾ ನಾಯ್ಕ, ಸಾಹಿತಿ ಮೋಹನ ಹಬ್ಬು, ವಕೀಲ ಎಂ.ಪಿ.ಭಟ್ಟ.
ಆಯೋಜಕ ಎಂ.ಎನ್. ಶಿವದಾಸ, ಎಂ.ಎಂ.ಕರ್ಕಿಕರ,ಅರುಣ ಶೇಣ್ವಿ, ನಾಗೇಂದ್ರ ನಾಯಕ, ಚಂದ್ರಕಾಂತ ನಡುಕಿನಮನಿ ಮತ್ತಿತರರು ಉಪಸ್ಥಿತರಿದ್ದರು.
ಅಂಕೋಲಾ ಸುತ್ತ ಮುತ್ತಲಿನ ನೂರಾರು ಜನರು ಕಾರ್ಯಕ್ರಮದಲ್ಲಿ ಆಸೀನರಾಗಿ ಪ್ರವಚನ ಆಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!