4 ವರ್ಷಗಳಲ್ಲಿ ಮೊದಲ ಸಲ ಪಾಕ್‌ಗೆ ಭದ್ರತಾ ನೆರವು : ಬಿಡೆನ್ ಸರ್ಕಾರದಿಂದ ಗ್ರೀನ್‌ ಸಿಗ್ನಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನಕ್ಕೆ ಸಹಾಯ ಮಾಡಲು ಅಮೆರಿಕ ಅಧ್ಯಕ್ಷ ಜೋ ಬಿಡನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಭಯೋತ್ಪಾದನೆ ನಿಗ್ರಹದ ಭಾಗವಾಗಿ ಪಾಕಿಸ್ತಾನಕ್ಕೆ 450 ಮಿಲಿಯನ್ ಡಾಲರ್ ಭದ್ರತಾ ನೆರವನ್ನು ಅಮೆರಿಕ ಅನುಮೋದಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಪಾಕಿಸ್ತಾನಕ್ಕೆ ಅಮೆರಿಕ ಯಾವುದೇ ಭದ್ರತಾ ನೆರವು ನೀಡಿರಲಿಲ್ಲ. ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಭಾಗವಾಗಿ F-16 ಫೈಟರ್ ಜೆಟ್‌ಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ.

US ವಿದೇಶಾಂಗ ಇಲಾಖೆಯು $450 ಶತಕೋಟಿ ಅಂದಾಜು ವೆಚ್ಚದಲ್ಲಿ F-16 ಫೈಟರ್ ಜೆಟ್‌ಗಳ ಮಾರಾಟವನ್ನು ವಿದೇಶಿ ಮಿಲಿಟರಿಗೆ ನೀಡುವ ನಿರ್ಧಾರವನ್ನು ಮಾಡಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ತಮಗೆ ಪ್ರಮುಖ ಪಾಲುದಾರನಾಗಿದ್ದು, ಈ ನೆರವಿನಿಂದಾಗಿ ಆ ಪ್ರದೇಶದ ಭದ್ರತಾ ಸಮತೋಲನಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಯುಎಸ್‌ ವಿದೇಶಾಂಗ ಚಿವಾಲಯ ತಿಳಿಸಿದೆ.

2018 ರಲ್ಲಿ ಪಾಕಿಸ್ತಾನಕ್ಕೆ ಎಲ್ಲಾ ರಕ್ಷಣಾ ಮತ್ತು ಭದ್ರತಾ ನೆರವನ್ನು ಸ್ಥಗಿತಗೊಳಿಸುವುದಾಗಿ ಟ್ರಂಪ್ ಘೋಷಿಸಿದರು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಪಾಲುದಾರನಲ್ಲ ಎಂದು ಹೇಳಿದರು. ಅದಾದ ಬಳಿಕ ಪಾಕಿಸ್ತಾನಕ್ಕೆ ಇದು ಮೊದಲ ಪ್ರಮುಖ ಭದ್ರತಾ ನೆರವು ನೀಡಲಾಗುತ್ತಿದೆ. ಈ ನೆರವು ಯುನೈಟೆಡ್ ಸ್ಟೇಟ್ಸ್ – ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧದ ಮುಖ್ಯವಾದ ಅಂಶವಾಗಿದೆ. F-16 ಫ್ಲೀಟ್ ಅನ್ನು ಪಾಕಿಸ್ತಾನವು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ಬಳಸುತ್ತದೆ ಮತ್ತು ಪಾಕಿಸ್ತಾನವು ಎಲ್ಲಾ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಯುಎಸ್ ವಕ್ತಾರರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!