February 6, 2026
Friday, February 6, 2026
spot_img

ಇಂಗ್ಲೆಂಡ್‌ಗೆ ಸೋಲಿನ ಕಹಿ: 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂಡರ್-19 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದು ಬೀಗಿದ್ದು, ಭಾರತ ದಾಖಲೆಯ 6ನೇ ಬಾರಿಗೆ U19 World Cup ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಹರಾರೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ , ವೈಭವ್ ಸೂರ್ಯವಂಶಿ ಅವರ 175 ರನ್ ಗಳ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 411 ರನ್ ಪೇರಿಸಿತ್ತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಯುವಪಡೆ 311 ರನ್ ಗಳಿಗೆ ಆಲೌಟ್ ಆಗುವ ಮೂಲಕ 100 ರನ್ ಗಳಿಂದ ಸೋಲು ಕಂಡಿದೆ.

ಇಂಗ್ಲೆಂಡ್ ಪರ ಕ್ಯಾಲೆಬ್ ಫಾಲ್ಕನರ್ ಸ್ಫೋಟಕ ಬ್ಯಾಟಿಂಗ್ ಮಾಡಿ 115 ರನ್ ಕಲೆಹಾಕಿದರು. ಬೆನ್ ಡಾಕಿನ್ಸ್ ಉತ್ತಮ ಬ್ಯಾಟಿಂಗ್ ಮಾಡಿ 66 ರನ್ ಕಲೆ ಹಾಕಿದರು. ಬೆನ್ ಮೇಯಸ್ 45, ಥಾಮಸ್ ರೆವ್ 31 ರನ್ ಕಲೆ ಹಾಕಿದರು.

ಭಾರತದ ಪರ ಅಂಬರೀಶ್ 3, ದೀಪೇಶ್ ದೇವೇಂದ್ರನ್, ಕನಿಷ್ಕ್ ಚೌಹಾನ್ ತಲಾ 2 ವಿಕೆಟ್, ಕಿಲಾನ್ ಪಟೇಲ್ ಮತ್ತು ಆಯೂಶ್ ಮಾತ್ರೆ ತಲಾ 1 ವಿಕೆಟ್ ಪಡೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !