ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಕ್ಷ ವಿರೋಧಿ ನಿಲುವು ಮತ್ತು ಟೀಕೆ ಹಿನ್ನೆಲೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹೈಕಮಾಂಡ್ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬುಧವಾರ ಹೇಳಿದರು.
ಪಕ್ಷದ ನಿಲುವಿನ ವಿರುದ್ಧ ಯತ್ನಾಳ್ ಮಾತನಾಡುವುದನ್ನು ಸಹಿಸುವುದಿಲ್ಲ. ತಾಳ್ಮೆಗೂ ಮಿತಿಯಿದೆ. ಅದನ್ನು ಯಾರಾದರೂ ಮೀರಿದರೆ ಶಿಸ್ತು ಕ್ರಮ ಅನಿವಾರ್ಯ ಎಂದು ಹೇಳಿದರು.
ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಖಂಡಿಸಿ ಬಿಜೆಪಿಯ ಬಂಡಾಯ ನಾಯಕರು ಬಳ್ಳಾರಿಗೆ ಪಾದಯಾತ್ರೆ ನಡೆಸಲು ಯೋಜನೆ ರೂಪಿಸಿರುವುದರ ಕುರಿತು ಮಾತನಾಡಿ, ಬೆಂಗಳೂರಿನಿಂದ ಮೈಸೂರಿಗೆ ನಡೆದ ಪಾದಯಾತ್ರೆಯಲ್ಲಿ ಈ ವಿಷಯ ಈಗಾಗಲೇ ಗಮನ ಸೆಳೆದಿದೆ. ಹೀಗಾಗಿ ಮತ್ತೆ ಪಾದಯಾತ್ರೆ ನಡೆಸುವ ಯಾವುದೇ ಪ್ರಸ್ತಾಪ ಪಕ್ಷದ ಮುಂದಿಲ್ಲ. ಆದರೂ, ರಮೇಶ ಜಾರಕಿಹೊಳಿ, ಯತ್ನಾಳ್ ಹಾಗೂ ಇತರ ಮುಖಂಡರು ಪಾದಯಾತ್ರೆ ಕೈಗೊಂಡರೆ ನಮ್ಮ ಅಭ್ಯಂತರವಿಲ್ಲ. ಆದರೆ. ಹೈಕಮಾಂಡ್ ಒಪ್ಪಗೆ ಪಡೆದು ಮಾಡಲಿ ಎಂದು ತಿಳಿಸಿದರು.