ಹಾರಿ ಹೋದ ನೀಲಿ ಹಕ್ಕಿ ಮರಳಿ ಗೂಡಿಗೆ ಬಂತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲವು ದಿನಗಳಿಂದ ಟ್ವಿಟ್ಟರ್ ನಲ್ಲಿ ಧಿಡೀರ್ ಆಗಿ ನೀಲಿ ಹಕ್ಕಿ ಹೋಗಿ ನಾಯಿ ಚಿತ್ರವನ್ನು ಲೋಗೋ ಪ್ರತ್ಯಕ್ಷವಾಗಿತ್ತು. ಶ್ವದೆಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿತ್ತು.
ಇದೀಗ ಮತ್ತೆ ನೀಲಿ ಹಕ್ಕಿ ಮೈಕ್ರೋಬ್ಲಾಗಿಂಗ್ ಸೈಟ್‌ಗೆ ಮರಳಿದೆ.

ಇದೀಗ ಎಲೋನ್ ಮಸ್ಕ್ ಹೀಗೇಕೆ ಮಾಡಿದ್ರು ಅನ್ನೋದು ನೆಟ್ಟಿಗರ ಗೊಂದಲಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಏಪ್ರಿಲ್ ಫೂಲ್‌ನ ತಮಾಷೆಯಾಗಿರಬಹುದು ಎಂದು ಕೆಲವರು ಭಾವಿಸಿದ್ದಾರೆ.

ಟ್ವಿಟರ್‌ನಲ್ಲಿ ನಾಯಿಯ ಲೋಗೋ ವೆಬ್ ಬಳಕೆದಾರರಿಗೆ ಮಾತ್ರವೇ ಕಾಣಿಸಿದೆ. ಆಯಪ್ ಬಳಕೆದಾರರಿಗೆ ಟ್ವಿಟ್ಟರ್ ಲೋಗೋದಲ್ಲಿ ಯಾವುದೇ ಬದಲಾವಣೆ ಕಾಣಿಸಿಕೊಂಡಿಲ್ಲ. ಅವರಿಗೆ ಕೇವಲ ನೀಲಿ ಹಕ್ಕಿ ಕಾಣಿಸುತ್ತಿತ್ತು ಎನ್ನಲಾಗಿದೆ.

ವರದಿಗಳ ಪ್ರಕಾರ ಮಸ್ಕ್ ಟ್ವಿಟ್ಟರ್‌ನ ಲೋಗೋವನ್ನು ನಾಯಿಗೆ ಬದಲಾಯಿಸಿದ ಬಳಿಕ ಅದರ ಬಗ್ಗೆ ತಮಾಷೆ ಮಾಡಿದ್ದಾರೆ. ಅವರು ಟ್ವಿಟ್ಟರ್ ಖರೀದಿ ಮಾಡುವುದಕ್ಕೂ ಮೊದಲೊಮ್ಮೆ ಟ್ವೀಟ್ ಮಾಡಿದ ಒಂದು ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಟ್ವಿಟ್ಟರ್ ಅನ್ನು ಖರೀದಿಸಬೇಕು ಹಾಗೂ ಅದರ ಲೋಗೋವನ್ನು ನಾಯಿಗೆ ಬದಲಾಯಿಸಬೇಕು ಎಂದು ಬರೆದುಕೊಂಡಿದ್ದರು. ತಾವು ನೀಡಿದ ಭರವಸೆಯಂತೆ ಕಂಪನಿಯ ಲೋಗೋವನ್ನು ಬದಲಾಯಿಸಲಾಗಿದೆ ಎಂದು ಅವರು ತಮಾಷೆಯಾಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!