ನಟ ಚೇತನ್ ವಿರುದ್ಧ ಅಸಹಕಾರ ಕ್ರಮಕ್ಕೆ ಮುಂದಾದ ಚಲನಚಿತ್ರ ವಾಣಿಜ್ಯ ಮಂಡಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟ ಚೇತನ್ ಅಹಿಂಸ (Chetan Ahimsa) ವಿರುದ್ಧ ಕ್ರಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka film chamber of Commerce) ಮುಂದಾಗಿದೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಫಿಲಂ ಛೇಂಬರ್ ಅಧ್ಯಕ್ಷ ಬಾ.ಮಾ.ಹರೀಶ್, ಚಿತ್ರಕುಟುಂಬದಲ್ಲಿದ್ದುಕೊಂಡು, ಚಿತ್ರರಂಗಕ್ಕೆ ಮುಗುಜರ ಉಂಟುಮಾಡುವಂಥಹಾ ಹೇಳಿಕೆಗಳನ್ನು ಚೇತನ್ ಅಹಿಂಸ ನೀಡುತ್ತಿದ್ದಾರೆ. ಅವರ ವಿರುದ್ಧ ಅಸಹಕಾರ ಕ್ರಮಕ್ಕೆ ಮುಂದಾಗುವ ಕುರಿತು ಚರ್ಚೆ ನಡೆಸಿದ್ದೇವೆ ಎಂದಿದ್ದಾರೆ.

ಇದೇ 27 ಕ್ಕೆ ಅಂಬರೀಶ್ ಸ್ಮಾರಕ ಉದ್ಘಾಟನೆ ಮಾಡಿದ್ವಿ ಜೊತೆಗೆ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರಿಟ್ಟಿದ್ದೀವಿ, ಆದರೆ ಈ ವಿಚಾರವಾಗಿ ನಟ‌ ಚೇತನ್ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಅಂಬರೀಶ್ ಸ್ಮಾರಕ ನಿರ್ಮಾಣ ಅಥವಾ ರೇಸ್​ಕೋರ್ಸ್​ ರಸ್ತೆಗೆ ಅಂಬರೀಶ್ ಹೆಸರಿಡಬೇಕು ಎಂಬುದು ಸುಮಲತಾ ಅವರ ಒತ್ತಾಯ ಆಗಿರಲಿಲ್ಲ ಇಡೀಯ ಚಿತ್ರರಂಗದ ಒತ್ತಾಯ ಆಗಿತ್ತು ಎಂದಿದ್ದಾರೆ.

ಅಂಬರೀಶ್ ಅವರು ಸಾಕಷ್ಟು ಸೇವೆ ಸಲ್ಲಿಸಿದ್ದಾರೆ, ಚೇತನ್ ಅಹಿಂಸ ಅವರು ಪದೇ ಪದೇ ಚಿತ್ರರಂಗದ ಒಕ್ಕೂರಲ ಅಭಿಪ್ರಾಯದ ವಿರುದ್ಧ ಸಾರ್ವಜನಿಕ ಆಕ್ಷೇಪ ವ್ಯಕ್ತಪಡಿಸಿ ಮುಜುಗರ ಉಂಟು ಮಾಡುತ್ತಿದ್ದಾರೆ. ಕುಟುಂಬದಲ್ಲಿ ಇದ್ದುಕೊಂಡುಡು ಈ ರೀತಿ ಮಾತನಾಡುವುದು ತಪ್ಪು, ಇಡೀ ಚಿತ್ರರಂಗದ ಅಷ್ಟು ಆಯಾಮಗಳು ಸೇರಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ ಹಾಗಾಗಿ ಸ್ಮಾರಕ ನಿರ್ಮಾಣ ಆಗಿದೆ. ಆದರೆ ಈ ಬಗ್ಗೆ ಚೇತನ್ ಆಕ್ಷೇಪ ವ್ಯಕ್ತಪಡಿಸಿರುವುದು ಅಕ್ಷಮ್ಯ ಅಪರಾಧ. ಈ ರೀತಿಯ ಹೇಳಿಕೆಗಳನ್ನು ಕೋಡುವುದರಿಂದ ಅವರಿಗೆ ತಿಳಿ ಹೇಳುವ ಕೆಲಸ ಮಾಡುತ್ತೀವಿ, ನಾವು ಅವರನ್ನು ಸಂಪರ್ಕಿಸುವ ಯತ್ನ ಮಾಡಿದೆವು ಆದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ, ಇದೇ ರೀತಿಯ ವರ್ತನೆ ಮುಂದುವರೆದರೆ ಚಿತ್ರರಂಗದಿಂದ ಅಸಹಕಾರ ಕ್ರಮವನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ.

ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ, ಚೇತನ್ ವಿರುದ್ಧ ಮುಂದಿನ ದಿನಗಳಲ್ಲಿ ಕ್ರಮ ಕೈಗೋಳ್ಳೊದು ಖಂಡಿತ. ಅಸಹಾಕಾರ ನೀಡುವ ತೀರ್ಮಾನಕ್ಕೆ ‌ಮುಂದಾಗಲಿದ್ದೀವಿ. ಚಿತ್ರರಂಗದ ಯಾವುದೇ ಅಂಗ ಸಂಸ್ಥೆಗಳು ಅವರ ಸಿನಿಮಾಕ್ಕೆ ಕೆಲಸ ಮಾಡುವುದಿಲ್ಲ. ಆದರೆ ಅಸಹಕಾರ ಕ್ರಮ ಜರುಗಿಸುವ ಮುನ್ನ ಇನ್ನೊಂದು ಸುತ್ತಿನ ಚರ್ಚೆ ಮಾಡಿ ನಿರ್ಧಾರ ಮಾಡುತ್ತೀವಿ. ಎಲ್ಲ ಅಂಗ ಸಂಸ್ಥೆಗಳು ಒತ್ತಾಯ ಮಾಡಿದ್ದರಿಂದಲೇ ಈ ರೀತಿಯ ಚರ್ಚೆಯೊಂದನ್ನು ನಾವು ಎತ್ತಿಕೊಂಡಿದ್ದೇವೆ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!