ಅಮೆರಿಕದಲ್ಲಿ ಭಾರತ ಮೂಲದ ಟೆಕ್ಕಿ ಕುಟುಂಬದ ನಾಲ್ವರ ಶವ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಮೆರಿಕದ ನ್ಯೂಜೆರ್ಸಿಯಲ್ಲಿ ಭಾರತೀಯ ಮೂಲದ ನಾಲ್ವರ ಕುಟುಂಬ ಶವವಾಗಿ ಪತ್ತೆಯಾಗಿದ್ದಾರೆ .

ಭಾರತದ ಉತ್ತರ ಪ್ರದೇಶ ಮೂಲದ ದಂಪತಿ ಹಾಗೂ ಅವರ ಇಬ್ಬರು ಮಕ್ಕಳ ಮೃತದೇಹ ದೊರೆತಿದೆ. ಕೊಲೆ ಹಾಗೂ ಆತ್ಮಹತ್ಯೆ ಶಂಕೆಯ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತೇಜ್​ ಪ್ರತಾಪ್​ ಸಿಂಗ್ (43), ಸೋನಾಲ್ ಪರಿಹಾರ್ (42), 10 ವರ್ಷದ ಮಗ ಹಾಗೂ 6 ವರ್ಷದ ಮಗಳು ಮೃತರೆಂದು ಗುರುತಿಸಲಾಗಿದೆ.

ಬುಧವಾರ ಸಂಜೆ 4:30ರ ಸುಮಾರಿಗೆ ಇಲ್ಲಿನ ಪ್ಲಾನ್ಸ್‌ಬರೋ ಮನೆಯಲ್ಲಿ ಎಲ್ಲರೂ ಶವವಾಗಿ ಪತ್ತೆಯಾಗಿದ್ದಾರೆ. ಈ ಕುರಿತು ದೂರವಾಣಿ ಕರೆ ಮೂಲಕ ಸಿಕ್ಕ ಮಾಹಿತಿ ಆಧಾರದ ಮೇಲೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.

ಶುಕ್ರವಾರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಮಿಡ್ಲ್‌ಸೆಕ್ಸ್ ಕೌಂಟಿ ಪ್ರಾಸಿಕ್ಯೂಟರ್ ಯೋಲಾಂಡಾ ಸಿಕ್ಕೋನ್ ಮತ್ತು ಪ್ಲಾನ್ಸ್‌ಬರೋ ಪೊಲೀಸ್ ಇಲಾಖೆಯ ಮುಖ್ಯಸ್ಥ ಎಮಾನ್ ಬ್ಲಾಂಚಾರ್ಡ್ ಜಂಟಿ ಹೇಳಿಕೆಯಲ್ಲಿ ತಿಳಿಸಿದರು.

. ಪ್ರಕರಣವನ್ನು ಕೊಲೆ ಮತ್ತು ಆತ್ಮಹತ್ಯೆ ಎಂಬ ಶಂಕೆಯಡಿ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ, ಈ ಪ್ರದೇಶದಲ್ಲಿ ನಡೆದ ಹೆಚ್ಚುವರಿ ಮಾಹಿತಿ ಅಥವಾ ಸಿಸಿಟಿವಿ ದೃಶ್ಯಗಳು ಹೊಂದಿದ್ದರೆ, ಅದನ್ನು ಸ್ಥಳೀಯರು ಪ್ಲಾನ್ಸ್‌ಬರೋ ಪೊಲೀಸ್ ಇಲಾಖೆಗೆ ನೀಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೃತರ ಸಂಬಂಧಿಕರು ಪ್ರತಿಕ್ರಿಯಿಸಿ, ತೇಜ್​ ಪ್ರತಾಪ್​ ಸಿಂಗ್ ಹಾಗೂ ಸೋನಾಲ್ ಪರಿಹಾರ್ ದಂಪತಿ ಯಾವಾಗಲೂ ಸಂತೋಷದಿಂದ ಇರುತ್ತಿದ್ದರು. ಇಬ್ಬರೂ ಮಾನವ ಸಂಪನ್ಮೂಲ ಕ್ಷೇತ್ರ ಸೇರಿದಂತೆ ಐಟಿಯಲ್ಲಿ ವೃತ್ತಿಜೀವನ ಸಾಗಿಸುತ್ತಿದ್ದರು’ ಎಂದು ತಿಳಿಸಿದ್ದಾರೆ. ಸಿಂಗ್ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ನೆಸ್ ಡಿಜಿಟಲ್ ಎಂಜಿನಿಯರಿಂಗ್‌ ಕಂಪನಿಯಲ್ಲಿ ಸಿಂಗ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!