Thursday, December 1, 2022

Latest Posts

ಟಿಪ್ಪುವಿನ ನಿಜಮುಖಗಳನ್ನು ಪುಸ್ತಕ ಹೊರತಂದಿದೆ: ವಾದಿರಾಜ್

ಹೊಸದಿಗಂತ ವರದಿ,ಮೈಸೂರು:

ಟಿಪ್ಪುವಿನ ಮುಚ್ಚಿಟ್ಟ ಅನೇಕ ನಿಜ ಮುಖಗಳನ್ನು ಅನೇಕ ಪುಸ್ತಕಗಳು ಹೊರತರುತ್ತಿವೆ. ಹಾಗಾಗಿ ಸತ್ಯ ಸಂಗತಿಯನ್ನು ಮುಚ್ಚಿಟ್ಟು ಯಾರನ್ನೂ ಯಾಮಾರಿಸಲು ಸಾಧ್ಯವಿಲ್ಲ ಎಂದು ಸಾಮರಸ್ಯ ವೇದಿಕೆಯ ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಹೇಳಿದರು.

ಭಾನುವಾರ ಸಂಜೆ ನಗರದ ರಂಗಾಯಣದಲ್ಲಿರುವ ಭೂಮಿ ಗೀತದಲ್ಲಿ ನಡೆದ ರಂಗಾಯಣದ ನಿದೇರ್ಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ಬರೆದಿರುವ ಟಿಪ್ಪುವಿನ ನಿಜಸ್ವರೂಪ ಕುರಿತ ನಾಟಕ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಟಿಪ್ಪುವಿನ ನಿಜ ಮುಖಗಳನ್ನು ಮುಚ್ಚಿಟ್ಟು, ಆತನನ್ನು ವೈಭವೀಕರಿಸಿ ಅನೇಕ ಜನರು ಪುಸ್ತಕಗಳನ್ನು ಬರೆದಿದ್ದಾರೆ. ಕಾಂಗ್ರೆಸ್‌ನವರು ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ಪ್ರೇಮಿ ಎಂದು ಬಣ್ಣಿಸುತ್ತಿದ್ದಾರೆ. ಆದರೆ ಸತ್ಯ ಸಂಗತಿ ಅರಿತಿರುವ ಚಿತ್ರದುರ್ಗದ ಜನರು ತಮ್ಮ ಜಿಲ್ಲೆಯಲ್ಲಿ ಈ ರೀತಿ ಸುಳ್ಳು ಕಥೆಗಳನ್ನು ಹೇಳುತ್ತಿರುವ ಕಾಂಗ್ರೆಸ್‌ನ್ನು ನಾಮಶೇಷ ಮಾಡಿದ್ದಾರೆ. ಚಿತ್ರದುರ್ಗದ ರಾಜ ವೀರ ಮದಕರಿನಾಯಕರನ್ನು ಮಾತುಕತೆಗೆಂದು ಕರೆಯಿಸಿಕೊಂಡು, ವಿಷ ಹಾಕಿ ಮೋಸದಿಂದ ಕೊಂದ ಟಿಪ್ಪು, ಭೈರಾ ಪಟ್ಟಣದಲ್ಲಿ ಮದಕರಿ ನಾಯಕರ ಮಗನನ್ನು ನೇಣು ಹಾಕಿ ಹತ್ಯೆ ಮಾಡಿದ್ದಾನೆ. ಚಿತ್ರದುರ್ಗದಲ್ಲಿ ದೇವಸ್ಥಾನಗಳನ್ನು ಹೊಡೆದು ಹಾಕಿದ್ದಾರೆ. ಅಲ್ಲಿ ಕಟ್ಟಿಸಿರುವ ಜುಮ್ಮ ಮಸೀದಿಯ ಮೆಟ್ಟಿಲುಗಳಿಗೆ ದೇವಸ್ಥಾನದ ಗೋಪುರಗಳ ಕಲ್ಲುಗಳನ್ನು ಹಾಕಿಸಿದ್ದಾನೆ. ಕೆಳ ವರ್ಗದ ಜನರು ಟಿಪ್ಪು ಜಯಂತಿಯನ್ನು ಒಪ್ಪಲಿಲ್ಲ. ಕೇರಳ ರಾಜ್ಯದ ವಶಕ್ಕೆ ಅಡ್ಡಿಯಾಗಿದ್ದ ಕೊಡಗಿನವರ ಮೇಲೆ ಕ್ರೂರತೆಯಿಂದ ನಡೆದುಕೊಂಡು, ಕೊಡವರ ಹತ್ಯೆಮಾಡಿಸಿ, ಕ್ರೌರ್ಯ ಮೆರೆದ, ಮಂಗಳೂರಿನಲ್ಲಿ 25ಕ್ಕೂ ಹೆಚ್ಚು ಚರ್ಚ್ಗಳನ್ನು ನೆಲಸಮ ಮಾಡಿ, ಅಲ್ಲಿ ಸೆರೆ ಸಿಕ್ಕವರನ್ನು ಶ್ರೀರಂಗಪಟ್ಟಣದ ತನಕ ನಡೆಸಿಕೊಂಡು ಬಂದು ಹಿಂಸೆ ನೀಡಿದ. ಹೀಗೆ ಟಿಪ್ಪುವಿನ ನಿಜಮುಖಗಳನ್ನು, ಮುಚ್ಚಿಟ್ಟ ಇತಿಹಾಸವನ್ನು ಸತ್ಯ ಆಧಾರಿತ, ಇತಿಹಾಸದ ನಿಜ ದಾಖಲೆಗಳನ್ನು ಒಳಗೊಂಡ ಪುಸ್ತುಕಗಳನ್ನು ಜನರ ಮುಂದೆ ಇಡುವಂತಹ ಪ್ರಯತ್ನ ನಡೆಸಲಾಗುತ್ತಿದೆ. ಪುಸ್ತಕಗಳನ್ನು ಓದಿ, ನಿಜ ಸತ್ಯ ಸಂಗತಿಗಳನ್ನು ತಿಳಿದುಕೊಳ್ಳುತ್ತಿರುವ ಜನರು ಕೂಡ ಜಾಗೃತರಾಗುತ್ತಿದ್ದಾರೆ. ಚರ್ಚೆ ಮಾಡುತ್ತಿದ್ದಾರೆ. ಹಾಗಾಗಿ ಈಗ ಯಾರನ್ನು ಯಾರೂ ಕೂಡ ಯಾಮಾರಿಸಲು ಸಾಧ್ಯವಿಲ್ಲ ಎಂದರು.
ಲೇಖಕ ರೋಹಿತ್ ಚಕ್ರತೀರ್ಥ ಮಾತನಾಡಿ, ಟಿಪ್ಪುವಿನ ನಿಜ ಕನಸುಗಳ ಕೃತಿಯನ್ನು ಎಡಪಂಥೀಯರು ಓದದೆ ವಿರೋಧ ಮಾಡುತ್ತಿದ್ದಾರೆ. ಮೊದಲು ಅವರು ಈ ಕೃತಿಯನ್ನು ಓದಲಿ, ಆ ನಂತರ ಪ್ರತಿಕ್ರಿಯೆ ನೀಡಲಿ. ಆದರೆ ಅವರು ಯಾವಾಗಾಲೂ ಯಾವುದಾದರೊಂದು ವಿಷಯ ತಿಳಿದುಕೊಳ್ಳುವ ಮೊದಲೇ, ಅದರ ಬಗ್ಗೆ ಟೀಕೆಗಳನ್ನು ಮಾಡುವುದು, ಅಪಪ್ರಚಾರ ಮಾಡುವುದನ್ನು ಚಾಳಿ ಮಾಡಿಕೊಂಡಿದ್ದಾರೆ. ನಿಜವಾದ ವಿಷಯಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಎಂದು ಕಿಡಿಕಾರಿದರು. ಅಡ್ಡಂಡ ಸಿ.ಕಾರ್ಯಪ್ಪ ಅವರು, ಈ ಕೃತಿ ಇತಿಹಾಸದ ಭಾಗವಾಗಿದೆ. ಅವರು ಕೂಡ ಇತಿಹಾಸದ ಭಾಗವಾಗಿದ್ದಾರೆ. ನಿಜವಾದ ಇತಿಹಾಸವನ್ನು ಕೊಡುವ ಕೃತಿಗಳು ಬಹಳಷ್ಟು ಇರಲಿಲ್ಲ, ಈಗ ಅಂತಹ ಕೊರತೆಯನ್ನು ನೀಗಿಸುವಂತಹ ಕೃತಿಗಳು ಹೆಚ್ಚಾಗಿ ಬರಬೇಕೆಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ
ಟಿಪ್ಪು ನಿಜ ಕನಸುಗಳು” ನಾಟಕ ಕೃತಿ ಬಿಡುಗಡೆಗೆ ವಿರೋಧಿಸುವ ಪ್ರಗತಿಪರರು ಹಾಗೂ ಬುದ್ಧಿಜೀವಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಂಗಾಯಣದಲ್ಲಿ ಕೆಲವರಿಂದ ತೀವ್ರ ವಿರೋಧ ಎದುರಿಸಿ ಮೆಟ್ಡು ನಿಂತು ಇಲ್ಲೆ ಇನ್ನೂ ಕೂಡ ನಿರ್ದೇಶಕನಾಗಿದ್ಧೇವೆ. ಈ ಕಾರ್ಯಕ್ರಮದ ವಿರುದ್ಧವಾಗಿ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಬುದ್ಧಿಜೀವಿಗಳು, ಈ ಹಿಂದೆ ಇಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದವರು, ಕೆಟ್ಟದಾಗಿ ನನ್ನ ವಿರುದ್ಧ ಬರೆದು, ಅದನ್ನು ಸಾಮಾಜಿಕ ಜಾಲದಲ್ಲಿ ಹಾಕಿ ವೈರಲ್ ಮಾಡಿದ್ರು. ಈ ಕಾರ್ಯಕ್ರಮದಲ್ಲಿ ಭಾಗಿ ಆಗುವರನ್ನು ವಿಷ ಜಂತುಗಳು ಎಂದು ಕರೆದರು. ಅವರು ಸತ್ಯವಂತರು, ಹಾಗಾದರೆ ನಾವು ವಿಷಜಂತುಗಳೆ” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಆದರೆ ನಾನು ಇದಕ್ಕೆ ತಲೆ ಕಡೆಸಿಕೊಳ್ಳಲಿಲ್ಲ. ಟಿಪ್ಪು ಕುರಿತು ಈ ಪುಸ್ತಕ ಬರೆದಿದ್ದೇನೆ. ಇದು ನಾಟಕದ ರೂಪ ಪಡೆಯುತ್ತಿದೆ. ಯಾರೂ ಏನೆ ವಿರೋಧ ಮಾಡಿದ್ರೂ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!