Wednesday, November 29, 2023

Latest Posts

ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೋಲನ್ನು ಅರಗಿಸಿಕೊಳ್ಳೋಕೆ ಉದ್ಯೋಗಿಗಳಿಗೆ ಒಂದು ದಿನ ರಜೆ ಕೊಟ್ಟ ಬಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಕಪ್ ಒಬ್ಬರಿಗೆ ಸಂಬಂಧಪಟ್ಟಿದ್ದಲ್ಲ ಇಡೀ ದೇಶಕ್ಕೆ ಸಂಬಂಧಿಸಿದ್ದು, ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಗೆದ್ದಿದ್ದರೆ ಇಡೀ ದೇಶ ಹೇಗೆ ಸಂಭ್ರಮಿಸುತ್ತಿತ್ತೋ, ಅದೇ ರೀತಿ ವಿಶ್ವಕಪ್ ಕೈತಪ್ಪಿದ್ದಕ್ಕೆ ಇಡೀ ದೇಶವೇ ಕಣ್ಣೀರಿಟ್ಟಿದೆ.

ಈ ಹಿನ್ನೆಲೆಯಲ್ಲಿ ಗುರುಗ್ರಾಮದ ಕಂಪನಿಯೊಂದು ಕಂಪನಿ ಉದ್ಯೋಗಿಗಳಿಗೆ ವಿಶ್ವಕಪ್ ಸೋತ ದುಃಖವನ್ನು ಅರಗಿಸಿಕೊಳ್ಳೋದಕ್ಕೆ ಒಂದು ದಿನದ ರಜೆಯನ್ನು ನೀಡಿದೆ.

ಹೌದು, ವಿಶ್ವಕಪ್ ಸೋಲಿನ ಪ್ರಭಾವ ನಿಮ್ಮೆಲ್ಲರ ಮೇಲಿದೆ ಎಂದು ನಂಬಿದ್ದೇವೆ, ಹಾಗಾಗಿ ಕಂಪನಿ ಒಂದು ದಿನ ರಿಲ್ಯಾಕ್ಸ್ ಮಾಡಿ ಸೋಲಿನ ಮೂಡ್‌ನಿಂದ ಹೊರಬರಲು ಸಮಯ ನೀಡುತ್ತಿದೆ, ಒಂದು ದಿನ ರಜೆ ಪಡೆದು ಮರುದಿನ ಕೆಲಸಕ್ಕೆ ಬನ್ನಿ ಎಂದು ಕಂಪನಿ ಹೇಳಿದೆ.

Imageಮೂವ್ಸ್ ಕಂಪನಿಯ ಎಚ್‌ಆರ್ ಕಳಿಸಿರುವ ಮೇಲ್ ಎಲ್ಲೆಡೆ ವೈರಲ್ ಆಗಿದ್ದು, ಕ್ರೀಡಾಭಿಮಾನಿಗಳ ದುಃಖವನ್ನು ಕಂಪನಿ ಹೆಚ್ಚೇ ಅರ್ಥಮಾಡಿಕೊಂಡಿದೆ ಎಂದಿದ್ದಾರೆ, ಜೊತೆಗೆ ಮೂಡ್ ಇಲ್ಲದೆ ಕೆಲಸ ಮಾಡಿದರೆ ಕೆಲಸದ ಕ್ವಾಲಿಟಿ ಹಾಳಾಗುತ್ತದೆ ಎಂದು ಕಂಪನಿ ಹೀಗೆ ಮಾಡಿರಬಹುದು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!