ಅಪ್ಪ ಹೊಡೆಯುತ್ತಾರೆ ಕ್ರಮ ಕೈಗೊಳ್ಳಿ ಎಂದು ಕಾಸರಗೋಡು ಠಾಣೆಗೆ ಬಂದು ಕೇಸ್ ಮಾಡಿದ ಬಾಲಕ!

ಹೊಸದಿಗಂತ, ಮಂಗಳೂರು:

ಕೈಕಾಲುಗಳಿಗೆ ಹೊಡೆಯುತ್ತಿದ್ದಾರೆ ಎಂದು ಏಳು ವರ್ಷದ ಪುಟಾಣಿಯೋರ್ವ ನೇರ ಪೊಲೀಸ್ ಠಾಣೆಗೆ ಬಂದು ತನ್ನ ತಂದೆಯ ವಿರುದ್ಧ ದೂರು ನೀಡಿದ ವಿಲಕ್ಷಣ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಇಲ್ಲಿನ ಮಹಿಳಾ ಪೊಲೀಸ್ ಠಾಣೆಗೆ ಬಂದ ಈ ಪೋರ, ತನ್ನ ತಂದೆಯ ವಿರುದ್ಧ ದೂರನ್ನೂ ದಾಖಲಿಸಿದ್ದಾನೆ. ತಂದೆ ಕೈಕಾಲುಗಳಿಗೆ ಹಲವು ಬಾರಿ ಹೊಡೆದಿದ್ದಾನೆ. ಕ್ರಮ ಕೈಗೊಳ್ಳಿ ಎಂದು ದೂರಿರುವ ಹಿನ್ನೆಲೆಯಲ್ಲಿ ದಿ ಜುವೈನಲ್ ಜಸ್ಟೀಸ್ ಕಾಯ್ದೆ ಅಡಿಯಲ್ಲಿ ಆರೋಪಿತನ ವಿರುದ್ದ ಪೊಲೀಸರು ಕೇಸು ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!