CINE | ಸೈಲೆಂಟಾಗಿ ಜನರ ಮನಸ್ಸಿನಲ್ಲಿ ಕೂರ‍್ತಿದೆ ‘ಫೋಟೊ’ ಸಿನಿಮಾ, ಇದ್ಯಾಕೆ ಸ್ಪೆಶಲ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿದೇಶಕ ಉತ್ಸವ್ ಗೋನವಾರ ನಿರ್ದೇಶನದ ಫೋಟೊ ಸಿನಿಮಾ ಸದ್ದಿಲ್ಲದೇ ಜನರ ಮನಸ್ಸನ್ನು ಮುಟ್ಟುತ್ತಿದೆ.

ಸ್ಯಾಂಡಲ್‌ವುಡ್ ಕಲಾವಿದರು ಫೋಟೊ ನೋಡಿ, ಇದು ಬಹುಕಾಲ ಎಲ್ಲರ ಮನಸ್ಸಿನಲ್ಲಿ ಉಳಿಯುವ ಸಿನಿಮಾ ಎಂದು ಹೇಳಿದ್ದಾರೆ.

ಉತ್ಸವ್ ಈ ಸಿನಿಮಾವನ್ನು ಈಗಾಗಲೇ ಸಾಕಷ್ಟು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಮಾಡಿದ್ದಾರೆ. ಆದರೆ ಈ ಸಿನಿಮಾ ಬರೀ ಚಿತ್ರೋತ್ಸವಕ್ಕೆ ಸೀಮಿತ ಆಗಬಾರದು, ಜನರಿಗೆ ಸುಲಭವಾಗಿ ತಲುಪಲಿ ಎನ್ನುವ ಕಾರಣಕ್ಕೆ ಥಿಯೇಟರ್‌ಗೆ ಸಿನಿಮಾ ತಂದಿದ್ದಾರೆ.

ಈ ಸಿನಿಮಾ ಹೆಜ್ಜೆಗೆ ಪ್ರಕಾಶ್ ರಾಜ್ ಸಾಥ್ ನೀಡಿದ್ದಾರೆ. ಕೊರೋನಾ ಕಾಲದ ಲಾಕ್‌ಡೌನ್‌ನಲ್ಲಿ ತಂದೆಮಗ ಹೇಗೆ ತಮ್ಮೂರಿಗೆ ತಲುಪುತ್ತಾರೆ ಅನ್ನೋದನ್ನು ಅದ್ಭುತವಾಗಿ ತೋರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!