ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ನಾಳೆ ಸ್ಫೋಟ ಸಂಭವಿಸಲಿದೆ ಎಂದು ಬೆದರಿಕೆ ಕರೆ ಮಾಡಿದ್ದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉತ್ತರ ಪ್ರದೇಶ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಬಂದಿದ್ದು, ಎಲ್ಲರನ್ನೂ ಆತಂಕಕ್ಕೂ ದೂಡಿತ್ತು. ತಕ್ಷಣವೇ ತನಿಖೆ ಚುರುಕುಗೊಳಿಸಿದ್ದು, ಬರೇಲಿಯಲ್ಲಿ ವಾಸವಿರುವ ಬಾಲಕ ಫೋನ್ ಮಾಡಿದ್ದಾನೆಂದು ತಿಳಿದುಬಂದಿದೆ.
ತಂದೆಯ ಫೋನ್‌ನಿಂದ ಬಾಲಕ ಕರೆ ಮಾಡಿದ್ದು, ತಂದೆ ಮಗನನ್ನು ವಿಚಾರಣೆಗಾಗಿ ಕರೆತರಲಾಗಿದೆ. ವಿಚಾರಣೆ ವೇಳೆ ನಾನು ಬೆದರಿಕೆ ಹಾಕಿಲ್ಲ ಎಂದು ಬಾಲಕ ಹೇಳಿದ್ದಾನೆ. ಸಾಮಾಜಿಕ ಜಾಲಾತಾಣಗಳಲ್ಲಿ ನಾಳೆ ರಾಮಮಂದಿರ ಬ್ಲಾಸ್ಟ್ ಆಗುವುದು ಎನ್ನುವ ಸಂದೇಶಗಳನ್ನು ನೋಡಿದ್ದೆ. ಅದನ್ನು ಪೊಲೀಸರಿಗೆ ತಿಳಿಸಲು ಕರೆ ಮಾಡಿದ್ದೆ, ನಾನು ಬೆದರಿಕೆ ಹಾಕಿಲ್ಲ ಎಂದು ಹೇಳಿದ್ದಾನೆ.