ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯಿತು ಹಂತಕರ ಇರಿತದ ಕ್ರೌರ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರಿಗೆ ಕುತ್ತಿಗೆ ಬಳಿ ಎರಡು ಬಾರಿ 12 ಇಂಚಿನಷ್ಟು ಕೊಯ್ದಿದ್ದು, ಚಾಕು 2-3 ಇಂಚಿನಷ್ಟು ಒಳಗೆ ಹೋಗಿ ಗಾಯವುಂಟಾಗಿದ್ದು, ಇರಿದ ಜಾಗದಲ್ಲೇ 2-3 ಬಾರಿ ಇರಿದಿದ್ದಾರೆ. ಒಟ್ಟು 42 ಕಡೆಗಳಲ್ಲಿ ಇರಿದ ಗಾಯಗಳಿವೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ.
ವಿಧಿ ವಿಜ್ಞಾನ ವಿಭಾಗದ ಡಾ. ಸುನೀಲ್​ ಬಿರಾದಾರ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ .
ಇದೀಗ ಗುರೂಜಿಯವರ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು ಶವವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಸುರಿಯುವ ಮಳೆಯ ನಡುವೆಯೇ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಶವವನ್ನು ಮೆರವಣಿಗೆ ಮೂಲಕ‌ ಸಾಗಿಸಲಾಗುತ್ತಿದೆ. ಸುಳ್ಳ ರಸ್ತೆಯ ಅಂತ್ಯಕ್ರಿಯೆ ಜಾಗದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!