ಕೇಬಲ್ ತುಂಡಾಗಿ ಮಧ್ಯೆ ನಿಂತ ಲಿಫ್ಟ್, ಸತ್ತೇ ಹೋದೆ ಎಂದುಕೊಂಡ ಮಹಿಳೆಗೆ ಹಾರ್ಟ್ ಅಟ್ಯಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೋಯ್ಡಾದಲ್ಲಿ ಅಪಾರ್ಟ್‌ಮೆಂಟ್ ಒಂದರ ಲಿಫ್ಟ್ ತುಂಡಾಗಿ, ಕಟ್ಟಡಗಳ ನಡುವೆ ಲಿಫ್ಟ್ ಸಿಲುಕಿದ್ದು, ಒಳಗಿದ್ದ ಮಹಿಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಲಿಫ್ಟ್‌ನ ಕೇಬಲ್ ತುಂಡಾಗಿದ್ದು, ಲಿಫ್ಟ್ ಬಂದು ನೆಲಕ್ಕೆ ಅಪ್ಪಳಿಸಿಲ್ಲ. ಅದರ ಬದಲಾಗಿ ಕಟ್ಟಡಗಳ ಮಧ್ಯೆ ಸಿಕ್ಕಿಬಿದ್ದಿದೆ. ಲಿಫ್ಟ್‌ನ ಒಳಗೆ ಮಹಿಳೆ ಒಬ್ಬರೇ ಇದ್ದು, ತಾನು ಸತ್ತು ಹೋದೆ ಎನ್ನುವ ಭಯದಿಂದ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಆದರೆ ಲಿಫ್ಟ್ ಕೆಳಕ್ಕೆ ಬಿದ್ದಿಲ್ಲ, ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಅವರು ಲಿಫ್ಟ್‌ನಲ್ಲಿ ಸಿಲುಕಿದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಮಹಿಳೆಯ ತಲೆ ಹಾಗೂ ಮೊಣಕೈ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಲಿಫ್ಟ್ ದುಸ್ಥಿತಿ ಬಗ್ಗೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಅಪಾರ್ಟ್‌ಮೆಂಟ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!