ಟಿಟಿಡಿಗೆ ಪತ್ರ ಬರೆದ ಕೆಎಂಎಫ್, ಮತ್ತೆ ತಿರುಪತಿ ಲಡ್ಡುಗೆ ನಂದಿನಿ ತುಪ್ಪ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವವಿಖ್ಯಾತ ತಿರುಪತಿ ಲಡ್ಡು ತಯಾರಿಕೆಯಲ್ಲಿ ನಂದಿನಿ ತುಪ್ಪವನ್ನೇ ಬಳಸಲಾಗಿದ್ದು, ಬೆಲೆ ಏರಿಕೆ ಹಿನ್ನೆಲೆಯಲ್ಲಿ ನಂದಿನಿ ತುಪ್ಪ ಬಳಕೆಗೆ ಟಿಟಿಡಿ ಹಿಂದೇಟು ಹಾಕಿತ್ತು.

ನಂದಿನಿ ತುಪ್ಪ ಪೂರೈಕೆ ವಿಚಾರ ರಾಜಕೀಯವಾದ ಬೆನ್ನಲ್ಲೇ ಇದೀಗ ಕೆಎಂಎಫ್ ಟಿಟಿಡಿಗೆ ಪತ್ರವೊಂದನ್ನು ಬರೆದಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಪತ್ರದಲ್ಲಿ ತಿರುಪತಿ ಲಡ್ಡು ತಯಾರಿಕೆಗೆ ನಾವು ತುಪ್ಪ ಪೂರೈಸಲು ಉತ್ಸುಕರಾಗಿದ್ದೇವೆ, ದರದ ಬಗ್ಗೆ ಮಾತನಾಡಲು ಸಭೆ ಆಯೋಜಿಸಬೇಕಿದೆ ಎಂದು ಕೆಎಂಎಫ್ ತಿಳಿಸಿದೆ. ಪ್ರತೀ ವರ್ಷ 30ಸಾವಿರ ಮೆಟ್ರಿಕ್ ಟನ್ ತುಪ್ಪ ಉತ್ಪಾದನೆಯನ್ನು ಕೆಎಂಎಫ್ ಮಾಡುತ್ತದೆ.

ದರದ ಬಗ್ಗೆ ಈ ಹಿಂದೆಯೇ ಮಾತುಕತೆಗಳಾಗಿವೆ, ಸಭೆಯನ್ನು ಆಯೋಜಿಸಿ ದರದ ಬಗ್ಗೆ ಚರ್ಚೆ ಮಾಡಿ ಮುಂದಿನ ನಿರ್ಧಾರಕ್ಕೆ ಬರೋಣ, ಇನ್ನು ಕೆಎಂಎಫ್‌ನಿಂದ ತುಪ್ಪ ಪೂರೈಕೆಯಾಗಿಲ್ಲ ಎಂದು ಹೇಳಿದ ಬಗ್ಗೆಯೂ ಸ್ಪಷ್ಟನೆ ನೀಡಬೇಕು ಎಂದು ಕೆಎಂಎಫ್ ಹೇಳಿದೆ.

ಸ್ಪರ್ಧಾತ್ಮಕ ಬಿಡ್ಡಿಂಗ್‌ನಿಂದಾಗಿ ಟಿಟಿಡಿಯ ತುಪ್ಪ ಪೂರೈಕೆ ಟೆಂಡರ್‌ನಲ್ಲಿ ಭಾಗಿಯಾಗಲು ಸಾಧ್ಯವಾಗದಿರುವ ಬಗ್ಗೆ ಕೆಎಂಎಫ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದೆ ಎಂದು ಉಲ್ಲೇಖಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!