ಮನೆಯಲ್ಲಿ ಸಾವಾದರೂ ಫಲಿತಾಂಶ ವೀಕ್ಷಿಸಲು ಕೇಂದ್ರಕ್ಕೆ ಬಂದ ಅಭ್ಯರ್ಥಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಎಲ್ಲ ಅಭ್ಯರ್ಥಿಗಳು ಉತ್ಸಾಹದಿಂದ ಮತಎಣಿಕೆ ಕೇಂದ್ರಗಳಿಗೆ ಬರುತ್ತಿದ್ದಾರೆ.

ಆದರೆ ಸುರಪುರ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ಮನೆಯಲ್ಲಿ ಸಾವಾಗಿದ್ದರೂ ಫಲಿತಾಂಶ ವೀಕ್ಷಿಸಲು ಕೇಂದ್ರಕ್ಕೆ ಬಂದಿದ್ದಾರೆ.

ಸಹೋದರನ ಮಗ ಮೃತಪಟ್ಟಿದ್ದು, ಮನಸ್ಸಿನಲ್ಲಿ ನೋವು ತುಂಬಿದೆ, ಆದರೂ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದಾರೆ. ಅನಾರೋಗ್ಯದಿಂದ ಸಹೋದರನ ಮಗ ರೂಪ್ ಕುಮಾರ್ ಮೃತಪಟ್ಟಿದ್ದು, ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!