ಹೊಸದಿಗಂತ ವರದಿ ಧಾರವಾಡ:
ಮೇ.10ರಂದು ವಿಧಾನಸಭೆಯ ಜಿಲ್ಲೆಯ ಏಳು ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಕೃಷಿ ವಿವಿಯ ಆವರಣದ ಮುಖ್ಯ ಕಟ್ಟಡಲ್ಲಿ ಪ್ರಾರಂಭವಾಗಿದೆ.
ಏಳು ಕ್ಷೇತ್ರಗಳ ಅಭ್ಯರ್ಥಿಗಳ ಚುಮಾವಣಾ ಏಜೆಂಟರ್ ಸಮ್ಮುಖದಲ್ಲಿ ಬೆಳಿಗ್ಗೆ 7.30ಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ವಿವಿಧ ಅಧಿಕಾರಿಗಳು ಸ್ಟ್ರಾಂಗ್ ರೂಮ್ ತೆರೆದರು.
ಮೊದಲಿಗೆ 7.59ಕ್ಕೆ ಮತ ಎಣಿಕೆ ಕಾರ್ಯ ನವಲಗುಂದ, ಕುಂದಗೋಳ, ಹು-ಧಾ ಪೂರ್ವ, ಹು-ಧಾ ಪಶ್ಚಿಮ, ಹು-ಧಾ ಸೆಂಟ್ರಲ್, ಧಾರವಾಡ, ಕಳಘಟಗಿ ಕ್ಷೇತ್ರಗಳ ಪ್ರಾರಂಭ ಆಯಿತು.