ಹೊಸದಿಗಂತ ವರದಿ, ವಿಜಯಪುರ:
ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ ಕಾರು ಅಪಘಾತವಾಗಿದ್ದು, ವೀಣಾ ಕಾಶಪ್ಪನವರ ಸೇರಿ ಮೂವರು ಗಂಭೀರ ಗಾಯಗೊಂಡಿರುವ ಘಟನೆ ನಗರದ ಸಿಂದಗಿ ಬೈಪಾಸ್ ಬಳಿ ನಡೆದಿದೆ.
ವೀಣಾ ಕಾಶಪ್ಪನವರ ತೆರಳುತ್ತಿದ್ದ ಕಾರು, ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಮುಂದಿನ ಕಾರ್‌ಗೆ ಡಿಕ್ಕಿಯಾಗಿದ್ದು, ಗಾಯಾಳುಗಳನ್ನು ನಗರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.