ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕೊಚ್ಚಿಯ ಪೆರಿಯಾರ್ ನದಿಗೆ ಕಾರ್ ಬಿದ್ದಿದ್ದು, ಇಬ್ಬರು ಯುವ ವೈದ್ಯರು ಮೃತಪಟ್ಟಿದ್ದಾರೆ. ಮೊಬೈಲ್‌ನಲ್ಲಿ ಗೂಗಲ್ ಮ್ಯಾಪ್ ಆನ್ ಮಾಡಿಕೊಂಡು ಐವರು ಕಾರ್‌ನಲ್ಲಿ ತೆರಳುತ್ತಿದ್ದರು. ಗೋತುರುತ್‌ನಲ್ಲಿ ಭಾರೀ ಮಳೆಯ ಮಧ್ಯೆ ಕಾರ್‌ನಲ್ಲಿ ತೆರಳುತ್ತಿದ್ದರು.
29 ವರ್ಷದ ಡಾ. ಅದ್ವೈತ್ ಹಾಗೂ ಡಾ ಅಜ್ಮಲ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರು ಗಾಯಗೊಂಡಿದ್ದಾರೆ. ಮುಂಬದಿ ಸೀಟ್‌ನಲ್ಲಿ ಕುಳಿತಿದ್ದ ಇಬ್ಬರು ವೈದ್ಯರು ಮೃತಪಟ್ಟಿದ್ದಾರೆ. ಕಾರ್ ಓಡಿಸುತ್ತಿದ್ದ ಡಾ ಅದ್ವೈತ್ ಮ್ಯಾಪ್ ನೋಡುತ್ತಾ ಎಡ ತಿರುವಿನ ಬದಲು ಮುಂದೆ ಹೋಗಿ ಸೀದ ನದಿಗೆ ಬಿದ್ದಿದ್ದಾರೆ.
ಡಾ. ಅದ್ವೈತ್ ಜನ್ಮದಿನದ ಶಾಪಿಂಗ್‌ಗಾಗಿ ಎಲ್ಲರೂ ತೆರಳಿದ್ದರು ಎನ್ನಲಾಗಿದೆ. ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಅಪಘಾತದ ತನಿಖೆಯಲ್ಲಿ ನಿರತರಾಗಿದ್ದಾರೆ.