ಕೇಂದ್ರ ಸರ್ಕಾರ ಮಹತ್ವದಿಂದ ತೀರ್ಮಾನ: ನಿವೃತ್ತ ಯೋಧರ ಪಿಂಚಣಿ ಹೆಚ್ಚಳಕ್ಕೆ ಸಂಪುಟ ಅಸ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕೇಂದ್ರ ಸಚಿವ ಸಂಪುಟವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಅದೇನೆಂದರೆ ಸಶಸ್ತ್ರ ಪಡೆಗಳ ನಿವೃತ್ತ ಯೋಧರಿಗೆ ಪಿಂಚಣಿ ನೀಡುವ ‘ಒಂದು ಶ್ರೇಣಿ, ಒಂದು ಪಿಂಚಣಿ’ (Revision Of OROP) ವ್ಯವಸ್ಥೆಯ ಪರಿಷ್ಕರಣೆಗೆ ಸಮ್ಮತಿ ಸೂಚಿಸಿದೆ. ಈ ಮೂಲಕ ಲಕ್ಷಾಂತರ ಯೋಧರಿಗೆ ಹೆಚ್ಚಿನ ಪಿಂಚಣಿ ಸಿಗಲಿದೆ.

‘ಒಂದು ಶ್ರೇಣಿ, ಒಂದು ಪಿಂಚಣಿ ಯೋಜನೆ ಅಡಿಯಲ್ಲಿ ನಿವೃತ್ತ ಯೋಧರು ಹಾಗೂ ಹುತಾತ್ಮರು ಅಥವಾ ನಿಧನ ಹೊಂದಿದ ಯೋಧರ ಪತ್ನಿಯರಿಗೆ ನೀಡುವ ಪಿಂಚಣಿಯನ್ನು ಪರಿಷ್ಕರಣೆ ಮಾಡಲಾಗಿದೆ. ಇದರಿಂದ 25.13 ಲಕ್ಷ ಜನರಿಗೆ ಅನುಕೂಲವಾಗಲಿದೆ’ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ 2015ರಲ್ಲಿ ಒಆರ್‌ಒಪಿ ಜಾರಿಗೆ ತಂದಿದೆ.ಪರಿಷ್ಕೃತ ಪಿಂಚಣಿಯು 2019ರ ಜುಲೈನಿಂದ 2022ರ ಜೂನ್‌ವರೆಗಿನ ಬಾಕಿಯನ್ನೂ (Arrears) ಒಳಗೊಂಡಿದೆ. ಬಾಕಿ ಸೇರಿ ಪಿಂಚಣಿ ನೀಡಲು ಕೇಂದ್ರ ಸರ್ಕಾರವು 23,638 ಕೋಟಿ ರೂ. ವ್ಯಯಿಸಲಿದೆ. ಯೋಜನೆಯ ಪರಿಷ್ಕರಣೆಯಿಂದ ವಾರ್ಷಿಕ 8,450 ಕೋಟಿ ರೂ. ಖರ್ಚಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!