ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಗೆ ಮತ್ತು ಅದರ ಎಲ್ಲ ಉಪನದಿಗಳ ಶುದ್ಧೀಕರಣಗೊಳಿಸಿ ಜನರಿಗೆ ಅವುಗಳ ಉಪಯೋಗವನ್ನು ಹೆಚ್ಚು ದಕ್ಷಗೊಳಿಸುವ ನಿಟ್ಟಿನಲ್ಲಿ 30 ಸಾವಿರ ಕೋಟಿ ರೂಪಾಯಿಗಳ ಯೋಜನೆಗಳನ್ನು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪ್ರಕಟಿಸಿದ್ದಾರೆ.
ನಮ್ಮ ಜಲ ಸಂಪನ್ಮೂಲ ಮತ್ತು ಇಂಧನ ನಮ್ಮ ಆರ್ಥಿಕ ಅಭಿವೃದ್ಧಿಗೆ ಅತ್ಯಂತ ಮೂಲಾಧಾರವಾಗಿದ್ದು, ಈ ದಿನಕ್ಕಿನಲ್ಲಿ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ನ್ಯಾಯಯುತವಾಗಿ ಗುರುತಿಸಿ ಬಳಸಬೇಕಾಗಿದೆ. ಪರಿಸರಾತ್ಮಕ ಸವಾಲುಗಳಿಂದ ನಮ್ಮ ಜಲಸಂಪನ್ಮೂಲಗಳನ್ನು ರಕ್ಷಿಸಿ ಸುಸ್ಥಿರ ಜಲ ಬಳಕೆ ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳ ಬಳಕೆಯನ್ನು ಖಾತ್ರಿ ಪಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಗಂಗೆಯ ಸ್ವಚ್ಛತೆಗೆ ಅನೇಕ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ‘ನಮಾಮಿ ಗಂಗೆ ’ಕಾರ್ಯಕ್ರಮ ‘ಜನ ಆಂದೋಲನ’ವಾಗಿ ಪರಿವರ್ತಿತವಾಗಿದ್ದು, ವಿವಿಧ ಸಂಘಸಂಸ್ಥೆಗಳ ನೆರವಿನೊಂದಿಗೆ ಗಂಗೆಯ ತಟದಲ್ಲಿರುವ 100ಕ್ಕೂ ಅಧಿಕ ಜಿಲ್ಲೆಗಳಲ್ಲಿ ಗಂಗೆಯನ್ನು ಸ್ವಚ್ಛಗೊಳಿಸಿ ಜನರಿಗೆ ಹೆಚ್ಚಿನ ಉಪಯೋಗವಾಗುವಂತೆ ಮಾಡಲು ಸಾಧ್ಯವಾಗಿದೆ.ಅಲ್ಲಿ ಜನರಿಗೆ ಸಮಸ್ಯೆಗಳಿಗೆ ಸೂಕ್ತ ಮಾತುಕತೆಗಳೊಂದಿಗೆ ಪರಿಹಾರವನ್ನು ಕಲ್ಪಿಸಲಾಗಿದೆ ಎಂದು ಅವರು ಯಮುನಾ ಪಾರ್ ಆಜಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮದಲ್ಲಿ ತಿಳಿಸಿದರು.