ಕೋಳಿ ಸಾಗಾಟದ ಲಾರಿ‌ ಮಗುಚಿ ಚಾಲಕ ಸ್ಥಳದಲ್ಲೇ ಸಾವು

ಹೊಸದಿಗಂತ ವರದಿ, ಮಡಿಕೇರಿ:
ಕೋಳಿ ಸಾಗಾಟದ ಲಾರಿಯೊಂದು ಮಗುಚಿದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಡಗರಹಳ್ಳಿ ಬಳಿಯ ಮಾರುತಿ ನಗರದಲ್ಲಿ ನಡೆದಿದೆ.
ಮೃತರನ್ನು ಮಂಗಳೂರು ಮೂಲದ ನಾಗಭೂಷಣ್ ಎಂದು ಗುರುತಿಸಲಾಗಿದೆ. ಮೈಸೂರಿನಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ, ಕೋಸ್ಟಲ್ ಫಾರ್ಮ್’ಗೆ ಸೇರಿದ ಲಾರಿ ಮಂಗಳವಾರ ಮುಂಜಾನೆ 5ಗಂಟೆ ಸುಮಾರಿಗೆ ಮಾರುತಿನಗರದ ತಿರುವಿನಲ್ಲಿ ಮಗುಚಿಕೊಂಡಿದೆ.
ಈ ಸಂಬಂಧ ಸುಂಟಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!