ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಣ್ಣನ ಮಗಳು ರಾತ್ರಿಯೆಲ್ಲಾ ಅಳ್ತಾಳೆ, ಅವಳ ಅಳೋ ಸದ್ದಿನಿಂದ ನಿದ್ದೆ ಬರ‍್ತಿಲ್ಲ ಎಂದು ಪುಟ್ಟ ಕಂದಮ್ಮನನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ.
ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಘಟನೆ ನಡೆದಿದ್ದು, ಮೊಹಮ್ಮದ್ ಶಕೀಲ್ ಎನ್ನುವವರ ಮಗಳು ಕಾಣೆಯಾಗಿದ್ದಾಳೆ ಎಂದು ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.
ಎಷ್ಟು ಹುಡುಕಿದರೂ ಮಗು ಎಲ್ಲಿದೆ ಎಂದು ತಿಳಿಯಲೇ ಇಲ್ಲ, ಸುತ್ತಮುತ್ತಲಿನ ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ನಂತರ ಮಗು ಕಾಣೆಯಾಗಿಲ್ಲ ಎನ್ನುವ ಮಾಹಿತಿ ತಿಳಿದುಬಂದಿತ್ತು.
ನಂತರ ಮನೆಯಲ್ಲೇ ಪೊಲೀಸರು ಹುಡುಕಾಟ ನಡೆಸಿದ್ದು, ಸೋಫಾ ಅಡಿ ಮಗುವಿನ ಮೃತದೇಹ ಸಿಕ್ಕಿದೆ. ಮಗುವಿನ ಅತ್ತೆಯೇ ಅವಳನ್ನು ಕೊಂದಿದ್ದು ಎನ್ನಲಾಗಿದ್ದು , ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಗು ಆಕೆಯ ಕೋಣೆಗೆ ಬಂದು ಆಕೆಯ ಜೊತೆಯೇ ಮಲಗುತ್ತೇನೆ ಎಂದು ಹಠ ಮಾಡಿದ್ದಳು, ತನ್ನ ನಿದ್ದೆಗೆ ಮಗುವಿನಿಂದ ಭಂಗ ಆಗುತ್ತದೆ ಎಂದು ಕೋಪದಿಂದ ಮಗುವಿಗೆ ಹೊಡೆದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.