Monday, December 11, 2023

Latest Posts

ನಿಮ್ಮ ಕತ್ತು ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬ! ಕತ್ತಿನ ಉದ್ದ ನಿಮ್ಮ ವರ್ತನೆಯನ್ನು ಹೇಳುತ್ತಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೂಗು ಉದ್ದ ಇದ್ದರೆ ಕೋಪಿಷ್ಟ, ಮೆಲಗಣ್ಣು ಇದ್ದರೆ ಅದೃಷ್ಟವಂತ, ಹೆಣ್ಮಕ್ಕಳಿಗೆ ದೇಹದ ಎಡಭಾಗದಲ್ಲಿ ಮಚ್ಚೆ ಇದ್ದರೆ ಕುಬೇರರಾಗುತ್ತಾರೆ ಹೀಗೆ…ದೇಹದ ರಚನೆಯ ಮೇಲೂ ಅದೃಷ್ಟ-ದುರಾದೃಷ್ಟವನ್ನು ಹೇಳಲಾಗುತ್ತದೆ. ಅಂತೆಯೇ ಕತ್ತಿನ ಉದ್ದವೂ ಮನುಷ್ಯರ ವ್ಯಕ್ತಿತ್ವದ ಪ್ರತಿಬಿಂಬವಂತೆ…

ಉದ್ದನೆಯ ಕತ್ತು
ಉದ್ದನೆಯ ಕುತ್ತಿಗೆಯನ್ನು ಹೊಂದಿರುವ ವ್ಯಕ್ತಿಯು ತನ್ನ ಸಮಸ್ಯೆಗಳನ್ನು ತಾನೇ ಪರಿಹರಿಸಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾನಂತೆ.  ಇಂತಹ ಜನ ತಮ್ಮ ಜೀವನದಲ್ಲಿ ಇತರರ ಹಸ್ತಕ್ಷೇಪವನ್ನು ಇಷ್ಟಪಡುವುದಿಲ್ಲ. ಯಾರನ್ನೂ ಅಷ್ಟು ಸುಲಭವಾಗಿ ನಂಬದೆ, ಚೆನ್ನಾಗಿ ಅರ್ಥಮಾಡಿಕೊಳ್ಳುವ ಕೆಲವರಿಗೆ ಮಾತ್ರ ತಮ್ಮ ಜೀವನದಲ್ಲಿ ಸ್ಥಾನ ಕೊಡುತ್ತಾರಂತೆ.

ಚಿಕ್ಕ ಕತ್ತು
ಚಿಕ್ಕ ಕುತ್ತಿಗೆಯನ್ನು ಹೊಂದಿರುವ ಜನರು ವಿಧೇಯರಾಗುತ್ತಾರೆ. ಯಾವುದೇ ವಿಷಯದಲ್ಲಿ ಬದ್ಧತೆ, ಇತರರ ನಡುವೆ ತಮಗಿರುವ ಬಾಂಧವ್ಯವನ್ನು ಗೌರವಿಸುತ್ತಾರೆ. ಅಲ್ಲದೆ ಸಮಾಜದಲ್ಲಿ ಜವಾಬ್ದಾರಿಯುತರು ಹಾಗೆಯೇ ಯಾರಿಗಾದರೂ ಸಮಸ್ಯೆಗಳಿದ್ದರೆ ಸಹಾಯ ಮಾಡಲು ಮುಂದಾಗುತ್ತಾರೆ. ಅವರು ಸಂಕಷ್ಟಕ್ಕೆ ಸಿಲುಕಿದರೂ ಸಹಾಯ ಮಾಡಲು ಹಿಂಜರಿಯುವುದಿಲ್ಲ.

ಸಾಮಾನ್ಯ ಉದ್ದನೆಯ ಕತ್ತು
ಸಾಮಾನ್ಯ ಕುತ್ತಿಗೆ ಹೊಂದಿರುವ ಜನರು ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಇಷ್ಟಪಡುತ್ತಾರೆ. ಇವರು ಎಲ್ಲಕ್ಕಿಂತ ಹೆಚ್ಚಾಗಿ ಶಾಂತಿ ಮತ್ತು ಸಾಮರಸ್ಯವನ್ನು ಗೌರವಿಸುತ್ತಾರೆ. ಅನಗತ್ಯ ವಾದಗಳು ಇವರಿಗೆ ಇಷ್ಟವಾಗುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!