ಆಂಬುಲೆನ್ಸ್ ಸಿಗದೆ ಬೈಕ್ ನಲ್ಲಿ ತಂದೆಯ ಶವ ಸಾಗಿಸಿದ ಮಕ್ಕಳು

ಹೊಸದಿಗಂತ ವರದಿ, ವೈ ಎನ್ ಹೊಸಕೋಟೆ (ಪಾವಗಡ) :

ಆಂಬುಲೆನ್ಸ್ ಸಿಗದೆ ವೃದ್ದನ ಮೃತದೇಹವನ್ನು ಬೈಕ್ ನಲ್ಲಿ ಮಕ್ಕಳು ಕೊಂಡೊಯ್ದ ಹೃದಯ ವಿದ್ರಾವಕ ಘಟನೆ ವೈ ಎನ್ ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.

ದಳವಾಯಿಹಳ್ಳಿ ಗ್ರಾಮದ 80 ವರ್ಷದ ಗುಡುಕಲ್ಲು ಹೊನ್ನೂರಪ್ಪ ಎನ್ನುವರುವಯೋಸಹಜ ಕಾಯಿಲೆಯಿಂದ ಬಳಲುತ್ತಾ ಕಾರಣ ವೈ.ಎನ್.ಹೋಸಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದಾರೆ. ಈ ವೇಳೆ ಮೃತಪಟ್ಟಿರುವುದು ದೃಢವಾಗಿದೆ. ನಂತರ ಮೃತ ಹೊನ್ನೂರಪ್ಪರ ಶವವನ್ನು ಸಾಗಿಸಲು ಆಂಬುಲೆನ್ಸ್ ಗಾಗಿ ಹುಡುಕಾಟ ನಡೆಸಲಾಗಿದೆ.
ಸಂಬಂಧಿಸಿದ ವೈದ್ಯರ ಬಳಿ ಚರ್ಚಿಸಲಾಗಿ, ಕಾನೂನು ರೀತ್ಯ 108 ವಾಹನದಲ್ಲಿ ಶವ ಸಾಗಿಸಲು ಸಾಧ್ಯವಿಲ್ಲ ಎಂಬ ಮಾಹಿತಿ ಮೃತ ಸಂಬಂಧಿಗಳಿಗೆ ತಿಳಿಸಲಾಗಿದೆ.

ಆದಾಗಿ ವಿದಿ ಇಲ್ಲದೆ ಹೊನ್ನೂರಪ್ಪನ ಮಕ್ಕಳು ತಮ್ಮ ತಂದೆಯ ಮೃತ ದೇಹವನ್ನು ತಮ್ಮ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಗ್ರಾಮಕ್ಕೆ ತೆರಳಿದ್ದಾರೆ.

ಸೂಕ್ಷ್ಮ ಪ್ರದೇಶವಾದ ವೈ.ಎನ್.ಹೊಸಕೋಟಯ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಹೋಬಳಿ ಕೇಂದ್ರದ ಸುಮಾರು ಹದಿನೈದು ಸಾವಿರ ಜನ ಸೇರಿದಂತೆ ಸುತ್ತಮುತ್ತಲಿ ಸುಮಾರು 34 ಹಳ್ಳಿಗಳ ರೋಗಿಗಳು ಹಾಗೂ ಆಂಧ್ರಪ್ರದೇಶ ಜನತೆಯೂ ಇಲ್ಲಿಗೆ ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಬರುತ್ತಾರೆ. ಪ್ರತಿನಿತ್ಯ ಸುಮಾರು 200-250 ಜನ ರೋಗಿಗಳು ಬೇಟಿ ನೀಡುತ್ತಾರೆ. ಈ ಹಿಂದೆ ಇದ್ದ ಆಂಬುಲೆನ್ಸ್ ಸೇವೆ ನಿಂತು ವರ್ಷಗಳೇ ಕಳೆದಿವೆ. ಹಲವಾರು ಬಾರಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ವಿಷಯ ತಲುಪಿಸಿದರೂ ಆಂಬುಲೆನ್ಸ್ ವ್ಯವಸ್ಥೆ ಮರು ಸ್ಥಾಪನೆಯಾಗಿಲ್ಲದೆ ಅನೇಕ ಅವಗಡಗಳಿಗೆ ತೊಂದರೆಯಾಗಿರುವ ಉದಾಹರಣೆಗಳು ಇವೆ. ಆದಾಗ್ಯೂ ಯಾರೊಬ್ಬರೂ ಎಚ್ಚೆತ್ತುಕೊಂಡು ಆಂಬುಲೆನ್ಸ್ ಸೇವೆ ಒದಗಿಸದಿರುವುದು ಇಂತಹ ಘಟನೆಗಳಿಗೆ ಕಾರಣವಾಗಿದೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!