ಅರುಣಾಚಲದಿಂದ ನಾಪತ್ತೆಯಾಗಿದ್ದ ಭಾರತೀಯ ಯುವಕನನ್ನು ಹಸ್ತಾಂತರಿಸಿದ ಚೀನಾ ಸೇನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರುಣಾಚಲ ಪ್ರದೇಶದ ಯುವಕನೊಬ್ಬನನ್ನು ಚೀನಾ ಅಪಹರಿಸಿದೆ ಎಂದು ಸಂಸದರೊಬ್ಬರು ಕೆಲದಿನಗಳ ಹಿಂದೆ ಟ್ವೀಟ್ ಮಾಡಿ ಅದು ಭಾರಿ ಚರ್ಚೆಗೆ ಕಾರಣವಾಗಿತ್ತಷ್ಟೆ.
ಇದೀಗ, ಆ ಯುವಕನನ್ನು ಚೀನಾದ ಸೇನೆ ಮರಳಿಸುವುದರೊಂದಿಗೆ ಪ್ರಕರಣ ಸುಖಾಂತ್ಯ ಕಂಡಿದೆ. ಯುವಕನೇ ಗಡಿದಾಟಿ ಅಲ್ಲಿಗೆ ಹೋಗಿದ್ದಾ ಅಥವಾ ಅಪಹರಣವಾ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲವಾದರೂ, ಕೇಂದ್ರದ ಸಚಿವರೇ ಈ ಯುವಕನ ಹಿಂತಿರುಗುವಿಕೆಯನ್ನು ಟ್ವೀಟ್ ಮೂಲಕ ಖಾತ್ರಿಪಡಿಸಿದ್ದಾರೆ.

ಈ ಬಗ್ಗೆ ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದು, ಅರುಣಾಚಲ ಪ್ರದೇಶದ ಮಿರಾಮ್ ಟ್ಯಾರೋನ್‌ನನ್ನು ಚೀನಾದ ಪಿಎಲ್‌ಎಯು ಭಾರತೀಯ ಸೇನೆಗೆ ಒಪ್ಪಿಸಿದೆ. ಆತನ ವೈದ್ಯಕೀಯ ಪರೀಕ್ಷೆ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಈ ಪ್ರಕರಣದಲ್ಲಿ ಚೀನಾದ ಪಿ ಎಲ್ ಎ ಸೇನೆಯೊಂದಿಗೆ ಸೂಕ್ತವಾಗಿ ವ್ಯವಹರಿಸಿ ಯುವಕನನ್ನು ಸುರಕ್ಷಿತವಾಗಿ ಕರೆತಂದಿದ್ದಕ್ಕಾಗಿ ನಮ್ಮ ಹೆಮ್ಮೆಯ ಭಾರತೀಯ ಸೇನೆಗೆ ಧನ್ಯವಾದಗಳು ಎಂದಿದ್ದಾರೆ.

ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಯುವಕನಾದ 17 ವರ್ಷದ ಮಿರಾಂ ಟ್ಯಾರೋನನ್ನು ಚೀನಾ ಸೇನೆ ಅಪಹರಿಸಿದೆ ಎಂದು ಸಂಸದ ತಪಿರ್ ಗಾವೋ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!