Sunday, October 1, 2023

Latest Posts

ಕೆಲಸ ಬೋರಿಂಗ್ ಎಂದು ಕಂಪನಿ ವಿರುದ್ಧ ಕೇಸ್ ಹಾಕಿ ಗೆದ್ದು, 33 ಲಕ್ಷ ರೂ. ಪರಿಹಾರ ಪಡೆದ ಆಸಾಮಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉದ್ಯೋಗದಲ್ಲಿ ತೃಪ್ತಿ ಸಿಗೋದು ಕೂಡ, ಸಂಬಳದಷ್ಟೇ ಮುಖ್ಯ. ಕೆಲಸ ಬೋರಿಂಗ್ ಎನಿಸಿದರೂ ಸಂಬಳಕ್ಕಾಗಿ ಕೆಲಸ ಮಾಡುವವರಿರುತ್ತಾರೆ. ಹಾಗೆ ಸಂಬಳ ಇಲ್ಲದಿದ್ದರೂ ಪರವಾಗಿಲ್ಲ, ಬೋರಿಂಗ್ ಕೆಲಸ ಮಾಡೋಲ್ಲ ಎನ್ನುವವರು ಇದ್ದಾರೆ.

ಇದಕ್ಕೆ ಉದಾಹರಣೆಯಂತೆ ಪ್ಯಾರಿಸ್ ನ ಪ್ರೆಡ್ರಿಕ್ ಡೆಸ್ನಾರ್ಡ್ ಎನ್ನುವ ವ್ಯಕ್ತಿ ತನ್ನ ಕೆಲಸ ಬೋರಿಂಗ್ ಇದೆ ಎಂದು ಕೋರ್ಟ್‌ನಲ್ಲಿ ಕಂಪನಿ ವಿರುದ್ಧ ಕೇಸ್ ಹಾಕಿ, ಕೇಸ್ ಗೆದ್ದಿದ್ದಾನೆ. ಇದೀಗ ಕಂಪನಿಯೇ ಈತನಿಗೆ 33 ಲಕ್ಷ ರೂ. ಪರಿಹಾರ ನೀಡಬೇಕಿದೆ.

ಡೆಸ್ನಾರ್ಡ್ ಇಂಟರ್‌ಪರ್‌ಫ್ಯೂಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮ್ಯಾನೇಜರ್ ಕೆಲಸ ಬಿಟ್ಟ ಕಾರಣ ಈತನನ್ನು ಇಷ್ಟವಿಲ್ಲದಿದ್ದರೂ ಮ್ಯಾನೇಜರ್ ಮಾಡಲಾಗಿತ್ತು. ಕೆಲಸದ ಒತ್ತಡ ಹಾಗೂ ಬೋರಿಂಗ್ ಕೆಲಸದಿಂದ ಡೆಸ್ನಾರ್ಡ್ ಬೇಸತ್ತಿದ್ದ. ಈ ಕೆಲಸದಿಂದ ನನ್ನ ಮಾನಸಿಕ ನೆಮ್ಮದಿ ಹಾಳಾಗಿದೆ ಎಂದು ನಾಲ್ಕು ವರ್ಷದ ಹಿಂದೆ ಕಂಪನಿ ವಿರುದ್ಧ ಕೇಸ್ ಹಾಕಿದ್ದ. ಕೆಲಸದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವಂತೆ ಕಂಪನಿ ಮಾಡಿದೆ. ನನಗೆ ಪರಿಹಾರ ಬೇಕು ಎಂದು ದೂರು ನೀಡಿ, ಕೇಸ್ ಗೆದ್ದು ಪರಿಹಾರ ಪಡೆದಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!