12ಕೋಟಿಗೆ ಮಾರಾಟವಾದ ಭೂತ ಬಂಗಲೆ: ಈ ಸಿನಿಮಾ ನೋಡಿದ್ರೆ ತಿಳಿಯುತ್ತೆ ಅಲ್ಲಿನ ಅಸಲಿಯತ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅದೊಂದು ಭೂತದ ಮನೆ.. ಅಲ್ಲಿ ದೆವ್ವ ಓಡಾಡುತ್ತೆ ಅಂತಾರೆ.. ಯಾರೂ ಕೂಡ ಆ ಕಡೆ ಹೋಗಲು ಧೈರ್ಯ ಮಾಡಲ್ಲ. ಅಂತಹ ಮನೆಯನ್ನು ಒಬ್ಬ ಉದ್ಯಮಿ ಖರೀದಿ ಮಾಡಿ ಆಶ್ಚರ್ಯವನ್ನುಂಟುಮಾಡಿದ್ದಾರೆ. ಈ ಮನೆ ಬಗ್ಗೆ ತಿಳಿದುಕೊಳ್ಳುವುದಾದರೆ,  ಇದನ್ನು 1736 ರಲ್ಲಿ ಬರ್ರಿಲ್ವಿಲ್ಲೆಯಲ್ಲಿ ಇದನ್ನು ನಿರ್ಮಾಣ ಮಾಡಲಾಯಿತು. ಅಲ್ಲಿ ಪೆರಾನ್ ಕುಟುಂಬವು 1971 ರಿಂದ 1980 ರವರೆಗೆ ಮನೆಯಲ್ಲಿ ವಾಸ ಮಾಡುತ್ತಿದ್ದರಂತೆ. ಆ ಕುಟುಂಬಕ್ಕೆ ದೆವ್ವಗಳು ಸದಾ ಕಾಟ ಕೊಡುತ್ತಿದ್ದವು ಎಂಬ ಸುದ್ದಿಗಳು ಕಥಾರೂಪದಲ್ಲಿ ಇಂದಿಗೂ ಹರಿದಾಡುತ್ತಿದೆ. 2013ರ ರವರೆಗೂ ಯಾರೂ ಆ ಮನೆ ಕಡೆ ಕಣ್ಣೆತ್ತಿ ಕೂಡ ನೋಡಲಿಲ್ಲ. 2013 ರಲ್ಲಿ ಬಂದ `ಕಾನ್ಜ್ಯೂರಿಂಗ್’ ಎಂಬ ಸಿನಿಮಾ ಆ ಮನೆಯಲ್ಲಿರುವ ದೆವ್ವಗಳ ಕುರಿತು ಚಿತ್ರಿಸಿದೆ. ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿನ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿತು. ಈ ಸಿನಿಮಾ ಮೂಲಕವೇ ಆ ಮನೆಯಲ್ಲಿ ದೆವ್ವಗಳಿವೆ ಎಂದು ಜಗತ್ತಿಗೆ ತಿಳಿದಿದ್ದ, ಅಂದಿನಿಂದ ಆ ಮನೆಯನ್ನು ಗೋಸ್ಟ್ ಹೌಸ್ ಎಂದು ಕರೆದರು.

2019 ರಲ್ಲಿ ಜೇನ್ ಮತ್ತು ಕೋರಿ ಹೆಂಜಿನ್ ಎಂಬುವವರು $ 4.39.00 ಗೆ ಮನೆಯನ್ನು ಖರೀದಿಸಿದರು. ಮನೆಯಲ್ಲಿ ನಿಜವಾಗಿಯೂ ಯಾವುದಾದರೂ ಆತ್ಮಗಳಿವೆಯೇ ಎಂದು ತಿಳಿಯಲು ಕೆಲ ವರ್ಷಗಳ ಕಾಲ ಸಂಶೋಧನೆ ನಡೆಸಿದರು. ಬಳಿಕ ಏನಾಯಿತೋ ಏನೋ ಆ ಮನೆಯನ್ನು 2021 ರಲ್ಲಿ $ 1.2 ಮಿಲಿಯನ್‌ಗೆ ಮಾರಾಟಕ್ಕೆ ಇಟ್ಟರು. ಆದರೆ ಇದುವರೆಗೂ ದೆವ್ವದ ಮನೆಯನ್ನು ಖರೀದಿಸಲು ಯಾರೂ ಮುಂದೆ ಬರಲಿಲ್ಲ.

ಪ್ರಪಂಚದಾದ್ಯಂತ ದೆವ್ವದ ಮನೆ ಎಂದು ಕರೆಯಲ್ಪಡುವ ಈ ಮನೆಯನ್ನು ಇದೀಗ ವಂಡರ್‌ ಗ್ರೂಪ್ LLC ನ ಮಾಲೀಕ ಜಾಕ್ವೆಲಿನ್ ನುನೆಜ್ 12 ಕೋಟಿ ರೂ.ಗೆ ($ 1.52 ಮಿಲಿಯನ್) ಖರೀದಿಸಿದ್ದಾರೆ. ಈ ಮನೆಯನ್ನು ಉಚಿತವಾಗಿ ಕೊಟ್ಟರೂ ಸ್ವೀಕರಿಸಲು ಹಿಂಜರಿಯುವಾಗ ಇಷ್ಟು ದೊಡ್ಡ ಮೊತ್ತಕ್ಕೆ ಮನೆ ಖರೀದಿಸಿದ್ದು ಏಕೆ ಎಂಬ ಪ್ರಶ್ನೆ ಸ್ಥಳೀಯವಾಗಿ ಉದ್ಭವಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಾಕ್ವೆಲಿನ್‌ “ಈ ಖರೀದಿಯು ನನ್ನ ವೈಯಕ್ತಿಕವಾಗಿದೆ. ನಾನು ಇದನ್ನು ರಿಯಲ್‌ ಎಸ್ಟೇಟ್‌ ಅಭಿವೃದ್ಧಿಗಾಗಿ ಖರೀದಿ ಮಾಡಿದ್ದಲ್ಲ, ಇದು ನನ್ನ ಸ್ವಂತ ನಂಬಿಕೆ ಮೇಲೆ ನಿಂತಿದೆ ಎಂದು ದಿ ಬೋಸ್ಟನ್ ಗ್ಲೋಬ್‌ಗೆ ಜಾಕ್ವೆಲಿನ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!