ದೇಶದ ಮೊದಲ ಮಂಕಿಪಾಕ್ಸ್‌ ಸೋಂಕಿತ ವ್ಯಕ್ತಿ ಸಂಪೂರ್ಣ ಗುಣಮುಖ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

 ದೇಶದ ಮೊದಲ ಮಂಕಿಪಾಕ್ಸ್‌ ಪ್ರಕರಣದ ರೋಗಿ ಸಂಪೂರ್ಣವಾಗಿ ಗುಣಮುಖಿತರಾಗಿದ್ದು, ಅವರ ಚರ್ಮದ ಮೇಲೆ ಕಂಡು ಬಂದಿದ್ದ ಗುಳ್ಳೆಗಳು ಮಾಯವಾಗಿವೆ.

ಈ ಕುರಿತು ಮಾಹಿತಿ ನೀಡಿದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌, ಜುಲೈ 14ರಂದು 35 ವರ್ಷದ ಕೊಲ್ಲಂ ಮೂಲದ ನಿವಾಸಿ ಯುಎಇನಿಂದ ಮರಳಿದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಪತ್ತೆಯಾಗಿತ್ತು.ಇದು ದೇಶದ ಮೊದಲ ಪ್ರಕರಣವಾಗಿದ್ದು, ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕೇರಳದ ಮೆಡಿಕಲ್‌ ಕಾಲೇಜಿನಲ್ಲಿ ಈ ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದ್ದು, ಗುಣಮುಖಿತರಾದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮಂಕಿಪಾಕ್ಸ್‌ ನಿಂದ ದೇಹದ ಮೇಲೆ ಕಾಣುವ ಗುಳ್ಳೆಗಳು ಕೂಡ ಮಾಯವಾಗಿದೆ. ವ್ಯಕ್ತಿಯನ್ನು ಎರಡು ಬಾರಿ ಎಲ್ಲಾ ರೀತಿಯಲ್ಲೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಎಲ್ಲದರಲ್ಲೂ ನೆಗೆಟಿವ್‌ ಬಂದಿದೆ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!