ವಿವೇಕ ಅಗ್ನಿಹೋತ್ರಿ ‘ವ್ಯಾಕ್ಸಿನ್ ವಾರ್’ ಚಿತ್ರದ ತಿರುಳು- ಭಾರತದ ಕೋವಿಡ್ ಲಸಿಕೆ ವಿರುದ್ಧವಿತ್ತು ಅಂತಾರಾಷ್ಟ್ರೀಯ ಸಂಚು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ʼದಿ ಕಾಶ್ಮೀರ್‌ ಫೈಲ್ಸ್‌ʼ ಚಿತ್ರದ ಮೂಲಕ ಬಹುನಿರೀಕ್ಷಿತ ನಿರ್ದೇಶಕ ಎನಿಸಿಕೊಂಡಿರುವ ವಿವೇಕ್‌ ಅಗ್ನಿ ಹೋತ್ರಿ ತಮ್ಮ ಮುಂದಿನ ಚಿತ್ರವಾದ ʼವ್ಯಾಕ್ಸಿನ್‌ ವಾರ್‌ʼ ಬಗ್ಗೆ ಈಗಾಗಲೇ ಹಲವಡೆ ರಿವೀಲ್‌ ಮಾಡಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಭಾರತ ಎದುರಿಸಿದ ಸಂಕಷ್ಟಗಳ ಕುರಿತಾಗಿ ಈ ಚಿತ್ರ ಇರಲಿದೆ ಎಂಬುದನ್ನು ಸ್ವತಃ ಅಗ್ನಿಹೋತ್ರಿಯವರೇ ಹೇಳಿದ್ದಾರೆ.

ಇದೀಗ ಚಿತ್ರದ ಕುರಿತು ಇನ್ನಷ್ಟು ಮಾಹಿತಿ ಹೊರಹಾಕಿರುವ ಅವರು ಈ ಚಿತ್ರವು ಕೋವಿಡ್‌ ಅಲೆಯ ಸಂದರ್ಭದಲ್ಲಿ ಭಾರತವು ಕೋವಿಡ್‌ ಲಸಿಕೆಯ ತಯಾರಿಸುವುದರ ವಿರುದ್ಧ ಹೇಗೆಲ್ಲಾ ಅಂತರಾಷ್ಟ್ರೀಯ ಸಂಚುಗಳಿದ್ದವು ಎಂಬುದನ್ನು ತೆರೆದಿಡಲಿದೆ ಎಂದಿದ್ದಾರೆ.

ಅವರು ತಮ್ಮ ಟ್ವೀಟರ್‌ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ಚಿತ್ರದ ಹೆಸರನ್ನು ಏಕೆ ʼವ್ಯಾಕ್ಸಿನ್‌ ವಾರ್‌ʼ ಎಂತಲೇ ಇಡಲಾಯಿತು ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಅವರದೇ ಮಾತುಗಳಲ್ಲಿ ಹೇಳಬೇಕೆಂದರೆ “ಕೋವಿಡ್‌, ಲಾಕ್‌ ಡೌನ್‌ ಕಾರಣದಿಂದ ಕಾಶ್ನೀರ್‌ ಫೈಲ್ಸ್‌ ಚಿತ್ರದ ಬಿಡುಗಡೆ ತಡವಾಗುತ್ತಿತ್ತು. ಈ ಸಂದರ್ಭದಲ್ಲಿ ಕೋವಿಡ್‌ ಅಲೆಯ ಕುರಿತಾಗಿ ನಾವು ಸಂಶೋಧನೆ ಆರಂಭಿಸಿದೆವು. ಅದಕ್ಕೆಂದೇ ನಮ್ಮ ತಂಡವೊಂದನ್ನು ನಿಯೋಜಿಸಿದೆ. ಈ ಸಂದರ್ಭದಲ್ಲಿ ಭಾರತವು ಲಸಿಕೆ ತಯಾರಿಸುತ್ತಿದೆ ಎಂಬ ಅಂಶದ ಕುರಿತು ರೀಸರ್ಚ್‌ ನಡೆಸಿದಾಗ, ಮೊದಲನೇಯದಾಗಿ ವ್ಯಾಕ್ಸೀನ್‌ ಅನ್ನು ಯಾರು ಕಂಡು ಹಿಡಿದರು ಎಂಬುದು ಯಾರಿಗೂ ತಿಳಿದಿಲ್ಲ. ಎಲ್ಲರೂ ದೊಡ್ಡ ಹೆಸರುಗಳನ್ನು ಹೇಳುತ್ತಾರೆ. ಆದರೆ ಇದನ್ನು ಮಾಡಿದ್ದು ಸಾಧಾರಣ ವಿಜ್ಞಾನಿಗಳು, ಅದರಲ್ಲೂ ವಿಶೇಷವಾಗಿ ಮಹಿಳಾ ವಿಜ್ಞಾನಿಗಳು. ತಮ್ಮ ದೈನಂದಿನ ಕೆಲಸಗಳ ಜೊತೆಗೆ ಈ ಮಹಿಳೆಯರು ಹಗಲು ರಾತ್ರಿ ಪ್ರಯೋಗಾಲಯಗಳಲ್ಲಿ ಸಮಯ ವ್ಯಯಿಸಿದ್ದಾರೆ. ನಾವು ಇವರೊಂದಿಗೆ ಹಲವು ಸಮಯದವರೆಗೆ ರೀಸರ್ಚ್‌ ನಡೆಸಿದಾಗ ಭಾರತದ ಮೇಲೆ ಒಂದು ರೀತಿಯ ಜೈವಿಕ ಯುದ್ಧ ನಡೆದಿರುವ ಅಂಶವನ್ನು ಕಂಡುಕೊಂಡೆವು. ಭಾರತವು ವ್ಯಾಕ್ಸೀನ್‌ ಕಂಡುಹಿಡಿಯುವುದು ಯಾರಿಗೂ ಇಷ್ಟವಿರಲಿಲ್ಲ. ಅದರಲ್ಲೂ ಹಣಕ್ಕೋಸ್ಕರ ಬೇರೆ ದೇಶದವರಿಗೆ ಕೆಲಸ ಮಾಡುವ ನಮ್ಮದೇಶವರೇ ಆದ ಹಲವರು ನಮ್ಮ ಶತ್ರುಗಳಾಗಿದ್ದರು. ಆದರೆ ಇವೆಲ್ಲವುಗಳ ಹೊರತಾಗಿಯೂ ಯಾವುದೇ ರೀತಿಯ ಅತ್ಯಾಧುನಿಕ ವೈದ್ಯಕೀಯ ಮೂಲಭೂತ ಸೌಕರ್ಯಗಳಿಲ್ಲದಿದ್ದರೂ ನಮ್ಮವರು ಜಗತ್ತಿನ್ಲಲಿಯೇ ಅತ್ಯಂತ ಸುರಕ್ಷಿತವಾದ ಲಸಿಕೆಯನ್ನು ಅತ್ಯಂತ ವೇಗವಾಗಿ ಕಂಡು ಹಿಡಿದರು. ಇದು ಅತ್ಯಂತ ಪ್ರೇರಣಾದಾಯಿಯಾದುದು. ಭಾರತದ ಜನರ ಸ್ವಾಭಿಮಾನ ಹೇಗೆ ಈ ಯುದ್ಧದಲ್ಲಿ ನಮ್ಮನ್ನು ಗೆಲ್ಲಿಸಿತು ಎಂಬುದನ್ನು ಈ ಚಿತ್ರ ವಿವರಿಸುತ್ತದೆ”

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!