ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೋಟೆಲ್ನಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕರ ಶವ ಪತ್ತೆಯಾಗಿದೆ.
ಪ್ರಾಧ್ಯಾಪಕರನ್ನು ಮೈನಕ್ ಪಾಲ್ ಎಂದು ಗುರುತಿಸಲಾಗಿದೆ. ಫಿಲಾಸಫಿ ವಿಭಾಗದ ಪ್ರೊಫೆಸರ್ ಮೈನಾಕ್ ಪಾಲ್ ಅವರ ರಕ್ತಸಿಕ್ತ ಶವ ನವೆಂಬರ್ 8 ರಂದು ವಾಶ್ ರೂಂನಲ್ಲಿ ಪತ್ತೆಯಾಗಿದ್ದು, ಕುತ್ತಿಗೆ ಮತ್ತು ಕೈಗಳ ಮೇಲೆ ಆಳವಾದ ಗಾಯಗಳಾಗಿವೆ ಎನ್ನಲಾಗಿದೆ.
ಜಾದವ್‌ಪುರ ವಿಶ್ವವಿದ್ಯಾಲಯ ಶಿಕ್ಷಕರ ಸಂಘ ಪಾಲ್ ಅವರನ್ನು ಪ್ರತಿಭಾವಂತ ವ್ಯಕ್ತಿ ಎಂದು ಹೇಳಿದೆ. ಅವರು ಶಿಕ್ಷಕರಾಗಿ ಮತ್ತು ಸಂಶೋಧಕರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ, ಅವರ ಸಾವಿನ ಸುದ್ದಿ ಕೇಳಿ ನಾವು ತೀವ್ರ ಆಘಾತಕ್ಕೆ ಒಳಗಾಗಿದ್ದೇವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪಾರ್ಥ ಪ್ರತಿಮ್ ರಾಯ್ ಹೇಳಿದ್ದಾರೆ.