ಮದುವೆ ಅಂದ್ರೆ ಖರ್ಚು. ಮದುವೆ ಖುಷಿ ಇದ್ದೇ ಇರುತ್ತದೆ. ಆದರೆ ಹಣ ಮಾತ್ರ ನೀರಿನಂತೆ ಖರ್ಚಾಗೋದನ್ನು ಇಗ್ನೋರ್ ಮಾಡೋದಕ್ಕೆ ಆಗೋದಿಲ್ಲ. ಛತ್ರ, ಡೆಕೋರೇಷನ್, ಊಟ, ಹೊಟೇಲ್, ಬಟ್ಟೆ, ಒಡವೆ, ಕಾರ್ಡ್, ಈವೆಂಟ್ಸ್ ಹೀಗೆ ಸಾಕಷ್ಟು ವಿಷಯಗಳಿಗೆ ಹಣ ಖರ್ಚು ಮಾಡಲೇಬೇಕು. ಆದರೆ ಬಜೆಟ್ ಫ್ರೆಂಡ್ಲಿ ಮದುವೆ ಪ್ಲಾನಿಂಗ್ ಡೀಟೆಲ್ಸ್ ಇಲ್ಲಿದೆ..
ರಿಯಲಿಸ್ಟಿಕ್ ಬಜೆಟ್ ಇಟ್ಟುಕೊಳ್ಳಿ. ಇಷ್ಟು ಹಣದ ಮೇಲೆ ನಾನು ಖರ್ಚು ಮಾಡೋದಿಲ್ಲ. ಇದರಲ್ಲೇ ಎಲ್ಲ ಇನ್‌ಕ್ಲೂಡ್ ಆಗಬೇಕು ಎಂದು ಮೆಂಟಲಿ ಫಿಕ್ಸ್ ಆಗಿ.
ನಿಮ್ಮ ಪ್ರಿಯಾರಿಟಿ ಏನು? ನಿಮ್ಮ ನೆಂಟರ ಎಕ್ಸ್‌ಪೆಕ್ಟೇಷನ್ಸ್ ಬಗ್ಗೆ ಮಾತಾಡ್ತಿಲ್ಲ. ನಿಮ್ಮ ಪ್ರಿಯಾರಿಟಿ ಏನು? ಯಾವುದಕ್ಕೆ ಜಾಸ್ತಿ ಪ್ರಾಮುಖ್ಯತೆ ಕೊಡಬೇಕು ಅನ್ನೋದನ್ನು ಡಿಸೈಡ್ ಮಾಡಿ.
ಕುಟುಂಬದ್ದು ಒಂದೇ ಮದುವೆ ಅಥವಾ ಕಡೆ ಮದುವೆ ಅಂತ ಸಿಕ್ಕವರನ್ನೆಲ್ಲ ಮದುವೆಗೆ ಆಹ್ವಾನ ಮಾಡ್ಬೇಡಿ. ಮದುವೆಗೆ ಬರೋರು ಆಪ್ತರಾಗಿರಬೇಕು. ಅವರನ್ನು ನೋಡಿ ಖುಷಿಯಾಗಬೇಕು. ಊಟ ಚನ್ನಾಗಿಲ್ಲ, ಡೆಕೋರೇಷನ್ ಇನ್ನೂ ಚನಾಗಿ ಮಾಡಿಸ್ಬೋದಿತ್ತು, ಹುಡುಗಿ ಮೇಕಪ್ ಚೀಪ್ ಆಗಿದೆ ಇಂಥ ಕಮೆಂಟ್ಸ್ ಮಾಡೋರಿಂದ ದೂರ ಇರಿ.
ಕಮ್ಯುನಿಟಿ ಹಾಲ್ಸ್ ಅಥವಾ ಗೊತ್ತಿರುವವರ ದೊಡ್ಡ ಲಾನ್ಸ್ ಮದುವೆಗೆ ಬುಕ್ ಮಾಡಿ, ಜನರಿಗೆ ತಕ್ಕಂತ ಛತ್ರ ಮಾಡಿದ್ರೆ ಸಾಕು. ಒಂದು ದಿನದ ಮದುವೆ, ಮನಸ್ಸಿಗೆ ಹತ್ತಿರ ಆದರೆ ಸಾಕು. ಅಷ್ಟೊಂದು ದುಡ್ಡಿರುವ ಸೆಲೆಬ್ರಿಟಿಗಳು ರಿಜಿಸ್ಟರ್ ಮ್ಯಾರೇಜ್ ಆಗೋದ್ಯಾಕೆ? ಯೋಚಿಸಿ..
ತುಂಬಾ ಒಳ್ಳೆಯ ದಿನವೂ ಅಲ್ಲ, ಕೆಟ್ಟ ದಿನವೂ ಅಲ್ಲ ಅನ್ನುವಂಥ ಡೇಟ್ ಮದುವೆಗೆ ಆಯ್ಕೆ ಮಾಡಿ. ಆಫ್ ಸೀಸನ್‌ನಲ್ಲಿ ಹಾಲ್‌ಗಳು ಕಡಿಮೆಗೆ ಸಿಗುತ್ತವೆ.
ಮದುವೆ, ರಿಸೆಪ್ಷನ್ ಬಿಟ್ಟು ಇನ್ನೆಲ್ಲ ಸಣ್ಣ ಪುಟ್ಟ ಫಂಕ್ಷನ್‌ಗಳಿಗೆ ನೀವೇ ಡೆಕೋರೆಟ್ ಮಾಡಿ. ದುಡ್ಡು ಉಳಿಸಿ.
ಬಟ್ಟೆಗಳನ್ನು ಜಾಸ್ತಿ ಹಣ ಕೊಟ್ಟು ತೆಗೆದುಕೊಳ್ತೀರಿ. ಆದರೆ ಅದನ್ನು ಮತ್ತೆ ಮತ್ತೆ ಬಳಸೋಕೆ ಸಾಧ್ಯವಾ? ಸಾಧ್ಯ ಇದ್ದರೆ ಮಾತ್ರ ತೆಗೆದುಕೊಳ್ಳಿ. ಇಲ್ಲ ರೆಂಟಿಂಗ್ ಆಪ್ಷನ್ಸ್ ತುಂಬಾನೆ ಇದೆ.
ಇನ್ವಿಟೇಷನ್ ಮೇಲೆ ಹಣ ಖರ್ಚು ಮಾಡಬೇಡಿ. ಈಗೆಲ್ಲ ಆನ್‌ಲೈನ್ ಇನ್ವೈಟ್ಸ್ ಸಾಕು. ನಿಮ್ಮ ಕಾರ್ಡ್ ಮದುವೆವರೆಗೂ ಕಾರ್ಡ್ ಆಮೇಲೆ ರದ್ದಿ ಅಷ್ಟೆ.