ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಸದ್ಯ ನಿಫಾ ವೈರಸ್ ಭಾರೀ ಸದ್ದು ಮಾಡುತ್ತಿದ್ದು, ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಹೋಲಿಸಿದರೆ ನಿಫಾ ವೈರಸ್ ಸೋಂಕಿಗೆ ಒಳಗಾದವರಲ್ಲಿ ಮರಣ ಪ್ರಮಾಣ ಹೆಚ್ಚು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ರಾಜೀವ್ ಬಹ್ಲ್ ಶುಕ್ರವಾರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಹ್ಲ್, ಕೋವಿಡ್ ಸಾವಿನ ಪ್ರಮಾಣವನ್ನು ಎರಡರಿಂದ ಮೂರು ಪ್ರತಿಶತ ಹೊಂದಿದ್ದರೆ, ನಿಫಾ ಸಾವಿನ ಪ್ರಮಾಣ 40 ರಿಂದ 70 ಪ್ರತಿಶತದವರೆಗೆ ಇದೆ ಎಂದು ತಿಳಿಸಿದ್ದಾರೆ.
ಕೊರೋನಾ ಮರಣ ಪ್ರಮಾಣ ಶೇ 2 ರಿಂದ 3ರಷ್ಟು ಮಾತ್ರ ಇತ್ತು, ಆದರೆ ನಿಫಾ ಮರಣ ಪ್ರಮಾಣ 40 ರಿಂದ70 ಪ್ರತಿಶತದಷ್ಟಿದೆ ಎಂದರು.
ಇನ್ನು ಕೇರಳದಲ್ಲಿ ಸೋಂಕು ಹರಡುವಿಕೆ ಮತ್ತೆ ಏರಿಕೆಯಾಗುತ್ತಿರುವುದೇಕೆ ಎನ್ನುವುದು ತಿಳಿಯುತ್ತಿಲ್ಲ, ಕೇರಳದಲ್ಲಿ ಕಂಡುಬಂದ ವೈರಸ್ ಬಾವಲಿಗಳಿಂದ ಹರಡುತ್ತಿದೆ ಎನ್ನುವುದನ್ನು ಪತ್ತೆ ಮಾಡಿದ್ದೇವೆ. ಆದರೆ ಬಾವಲಿಗಳಿಂದ ಮನುಷ್ಯರಿಗೆ ಯಾವ ರೀತಿ ಸೋಂಕು ಹರಡುತ್ತದೆ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಅದನ್ನು ಪತ್ತೆಮಾಡಲು ಈ ಬಾರಿ ಮತ್ತೆ ಪ್ರಯತ್ನಿಸುತ್ತಿದ್ದೇವೆ. ಮಳೆಗಾಲದ ಸಮಯದಲ್ಲೇ ಇದು ಹೆಚ್ಚಾಗಿ ಹರಡುತ್ತದೆ’ ಎಂದು ಅವರು ಹೇಳಿದರು.