ಇಂಡೋ ಫೆಸಿಫಿಕ್‌, ಆರ್ಥಿಕತೆ ಕುರಿತು ಚರ್ಚಿಸಲು ಭಾರತಕ್ಕೆ ಭೇಟಿ ನೀಡಲಿದ್ದಾರೆ ಅಮೆರಿಕ ಆರ್ಥಿಕ ಸಚಿವಾಲಯದ ಉಪಕಾರ್ಯದರ್ಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಅಮೆರಿಕದ ಖಜಾನೆಯ ಉಪಕಾರ್ಯದರ್ಶಿ ವಾಲಿ ಅಡೆಯೆಮೊ ಅವರು ಆಗಸ್ಟ್‌ 24 ರಿಂದ ಮೂರ ದಿನಗಳ ಕಾಲ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಎರಡು ದಿನ ಮುಂಬೈ ಹಾಗೂ ಒಂದು ದಿನ ನವದೆಹಲಿಯ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ತಮ್ಮ ಭೇಟಿಯುದ್ದಕ್ಕೂ ಅವರು ಭಾರತ-ಯುಎಸ್‌ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಹೆಚ್ಚಿನ ಒತ್ತು ನೀಡಲಿದ್ದಾರೆ. ಹಾಗೂ ಭಾರತ ಮತ್ತು ಯುಎಸ್‌ ನಡುವಿನ ಆರ್ಥಿಕತೆ, ಭದ್ರತೆ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಒತ್ತಿಹೇಳಲಿದ್ದಾರೆ.

ಎರಡು ದೇಶಗಳ ನಡುವಿನ ವ್ಯಾಪಕ ಹೂಡಿಕೆ ಮತ್ತು ವ್ಯಾಪಾರದ ಹರಿವಿನ ಕುರಿತು ಚರ್ಚಿಸಲಿರುವ ಅವರು ಭಾರತದೊಂದಿಗೆ ಹೆಚ್ಚಿನ ಪೂರೈಕೆ ಸರಪಳಿ ನಿರ್ಮಿಸುವ ಕುರಿತು ಹಾಗೂ ಇಂಡೋ-ಫೆಸಿಫಿಕ್‌ ಎಕನಾಮಿಕ್‌ ಫೋರಂಗಳ ಕುರಿತೂ ಚರ್ಚಿಸಲಿದ್ದಾರೆ. ಇಂಧನ ಭದ್ರತೆಯನ್ನು ಹೆಚ್ಚಿಸುವುದು, ಜಾಗತಿಕವಾಗಿ ಆಹಾರ ಅಭದ್ರತೆಯನ್ನು ಪರಿಹರಿಸುವುದು ಮತ್ತು ಅಕ್ರಮ ಹಣಕಾಸು ಹರಿವುಗಳನ್ನು ಎದುರಿಸುವಂತಹ ಪ್ರಮುಖ ವಿಷಯಗಳ ಕುರಿತೂ ಅವರು ಗಮನಹರಿಸಲಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!