May 23, 2026
Saturday, May 23, 2026
spot_img

ಸೆಲ್ಫಿ ಆಸೆಗೆ ಪ್ರಾಣವೇ ಹೋಯ್ತು! ವಂದೇ ಭಾರತ್ ರೈಲು ಡಿಕ್ಕಿ: ಇಬ್ಬರ ದುರ್ಮರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್‌ನ ರಾಜ್‌ಕೋಟ್ ಸಮೀಪ ವೇಗವಾಗಿ ಸಂಚರಿಸುತ್ತಿದ್ದ ವಂದೇ ಭಾರತ್ ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಸಂಜೆ ಸುಮಾರು 4.45ರ ವೇಳೆಗೆ ಭಕ್ತಿನಗರ ಮತ್ತು ರಿಬ್ಡಾ ರೈಲು ನಿಲ್ದಾಣಗಳ ಮಧ್ಯದ ಕ್ರಾಸಿಂಗ್ ಬಳಿ ಈ ಘಟನೆ ನಡೆದಿದೆ. ವೆರಾವಲ್–ಅಹಮದಾಬಾದ್ ವಂದೇ ಭಾರತ್ ರೈಲು ವೇಗವಾಗಿ ಹಾದುಹೋಗುತ್ತಿದ್ದಾಗ, ಮೂವರು ಯುವಕರು ಹಳಿಗಳ ಸಮೀಪ ನಿಂತು ಗುಂಪು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದರು. ರೈಲು ದೂರದಲ್ಲಿದೆ ಎಂದು ತಪ್ಪಾಗಿ ಅಂದಾಜಿಸಿದ ಪರಿಣಾಮ, ಅವರು ಅಪಾಯಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ:

ಘಟನೆಯ ಸ್ಥಳದಲ್ಲೇ ಒಬ್ಬರು ಮೃತಪಟ್ಟರೆ, ಇನ್ನಿಬ್ಬರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮತ್ತೊಬ್ಬರು ಸಾವನ್ನಪ್ಪಿದ್ದು, ಮೂರನೇ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರನ್ನು ಸಂದೀಪ್ ಪಟೇಲ್ ಮತ್ತು ಸಂದೀಪ್ ಕೋಲಿ ಎಂದು ಗುರುತಿಸಲಾಗಿದೆ. ಇವರು ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರು ಎನ್ನಲಾಗಿದೆ. ಗಾಯಾಳು ಕಪಿಲ್ ಪಟೇಲ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !