ಹೊಸದಿಗಂತ ಡಿಜಿಟಲ್ ಡೆಸ್ಕ್:
ವರುಣ್ ಆರಾಧ್ಯ ಅವರು ಸದ್ಯ ಸುದ್ದಿಯಲ್ಲಿ ಇದ್ದಾರೆ. ರೀಲ್ಸ್ ಮೂಲಕ ಫೇಮಸ್ ಆಗಿದ್ದ ಇವರು ನಂತರ ಕಲರ್ಸ್ ಕನ್ನಡದ ‘ಬೃಂದಾವನ’ ಧಾರಾವಾಹಿಯಲ್ಲಿ ನಟಿಸಿದರು. ಈಗ ಅವರು ಮಾಜಿ ಗೆಳೆತಿ ವರ್ಷಾ ಕಾವೇರಿಗೆ ಬ್ಲ್ಯಾಕ್ಮೇಲೆ ಮಾಡುತ್ತಿದ್ದಾರೆ ಎಂದು ವರದಿ ಆಗಿತ್ತು. ಆದರೆ, ಆ ರೀತಿ ಇಲ್ಲ ಎಂದು ವರ್ಷಾ ಕಾವೇರಿ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ. ತಾವು ದೂರು ನೀಡಿದ್ದು ಏಕೆ ಎಂಬ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ವರುಣ್ ಆರಾಧ್ಯ ರೀಲ್ಸ್ ಮೂಲಕ ಫೇಮಸ್ ಆದರು. ವರ್ಷಾ ಕಾವೇರಿ ಜೊತೆ ಪರಿಚಯ ಬೆಳೆದಿದ್ದು ಕೂಡ ಸೋಶಿಯಲ್ ಮೀಡಿಯಾದಿಂದಲೇ. ಇಬ್ಬರೂ ಹಲವು ವರ್ಷ ಪ್ರೀತಿಯಲ್ಲಿ ಇದ್ದರು. ಆ ಬಳಿಕ ಬ್ರೇಕಪ್ ಮಾಡಿಕೊಳ್ಳೋ ನಿರ್ಧಾರಕ್ಕೆ ಬಂದರು. ಹೀಗಿರುವಾಗಲೇ ವರುಣ್ ಆರಾಧ್ಯ ವಿರುದ್ಧ ವರ್ಷಾ ಕಾವೇರಿ ದೂರು ನೀಡಿದ್ದರು. ‘ಖಾಸಗಿ ಫೋಟೋ ಇಟ್ಟುಕೊಂಡು ವರುಣ್ ಬೆದರಿಸುತ್ತಿದ್ದಾನೆ’ ಎಂಬುದಾಗಿ ವರ್ಷಾ ದೂರು ನೀಡಿರುವುದಾಗಿ ವರದಿ ಆಗಿತ್ತು. ಆದರೆ, ಇದು ಸುಳ್ಳು ಎಂದು ವರ್ಷಾ ಹೇಳಿದ್ದಾರೆ.
‘ಎಲ್ಲಕಡೆ ವೈರಲ್ ಆಗಿರುವುದು ಸುಳ್ಳು ಮಾಹಿತಿ. ನಾನು ಇನ್ಸ್ಟಾಗ್ರಾಮ್ ಪ್ರೊಫೈಲ್ ಮತ್ತು ಇತರ ಸಾಮಾಜಿಕ ಜಾಲತಾಣಗಳಿಂದ ರೀಲ್ಸ್ಗಳನ್ನು ತೆಗೆಯುವುದರ ಕುರಿತಾಗಿದೆ. ನಕಲಿ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ. ಮೂರು ದಿನ ಕಾಯಿರಿ. ನಾನು ಕ್ಲ್ಯಾರಿಟಿಯೊಂದಿಗೆ ಬರುತ್ತೇನೆ’ ಎಂದಿದ್ದಾರೆ ವರ್ಷಾ. ಒಟ್ಟಿಗೇ ಮಾಡಿರುವ ರೀಲ್ಸ್‌ಗಳಿಗೆ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ಸ್ ಇರುತ್ತದೆ. ಇಂಥವುಗಳನ್ನು ತೆಗೆಯಬಾರದು ಎನ್ನುವ ವಿಷಯಕ್ಕೆ ಪೊಲೀಸರ ಬಳಿ ಹೋಗಿರುವ ಸಾಧ್ಯತೆ ಇದೆ.