ನಾಳೆ 12 ಗಂಟೆಗಳ ಕಾಲ ತಿರುಪತಿ ದೇವಸ್ಥಾನದ ಬಾಗಿಲು ಬಂದ್:‌ ದರ್ಶನಕ್ಕೆ ಬ್ರೇಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೂರ್ಯಗ್ರಹಣದ ಸಂದರ್ಭ ಹಿನ್ನೆಲೆ ನಾಳೆ (ಮಂಗಳವಾರ) ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನದ ಬಾಗಿಲು 12 ಗಂಟೆಗಳ ಕಾಲ ಮುಚ್ಚಲಾಗುವುದು ಎಂದು ಟಿಟಿಡಿ ಮಾಹಿತಿ ತಿಳಿಸಿದೆ. 25 ರಂದು ಸಂಜೆ 5.11 ರಿಂದ 6.27 ರವರೆಗೆ ಸೂರ್ಯಗ್ರಹಣ ಸಂಭವಿಸಲಿದ್ದು, 25 ರಂದು ಬೆಳಿಗ್ಗೆ 8.11 ರಿಂದ 7.30 ರವರೆಗೆ ಶ್ರೀವಾರಿ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುವುದು ಎಂದು ಟಿಟಿಡಿ ಬಹಿರಂಗಪಡಿಸಿದೆ. ಈ ಸಂದರ್ಭದಲ್ಲಿ ಎಲ್ಲಾ ರೀತಿಯ ವಿಶೇಷ ದರ್ಶನವನ್ನು ರದ್ದುಗೊಳಿಸಲಾಗಿದ್ದು, ಗ್ರಹಣದ ನಂತರ ಸರ್ವದರ್ಶನ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಟಿಟಿಡಿ ತಿಳಿಸಿದೆ.

ಲಡ್ಡೂ ಮಾರಾಟ, ಅನ್ನಪ್ರಸಾದ ವಿತರಣೆ ರದ್ದು ಮಾಡುವುದಲ್ಲದೆ, ಗ್ರಹಣಕ್ಕೂ ಮುನ್ನ ದೇವಸ್ಥಾನವನ್ನು ಸ್ವಚ್ಛಗೊಳಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಅಕ್ಟೋಬರ್ 24, 25 ಮತ್ತು ನವೆಂಬರ್ 8 ರಂದು ಬ್ರೇಕ್ ದರ್ಶನಗಳನ್ನು ರದ್ದುಗೊಳಿಸುವುದಾಗಿ ಟಿಟಿಡಿ ಈಗಾಗಲೇ ಘೋಷಿಸಿದೆ. ಅಕ್ಟೋಬರ್ 24 ರಂದು, ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ದೀಪಾವಳಿ ಆಚರಣೆಯಿದೆ. ಮತ್ತು ಅಕ್ಟೋಬರ್ 25 ರಂದು ಸೂರ್ಯಗ್ರಹಣ ಮತ್ತು ನವೆಂಬರ್ 8 ರಂದು ಚಂದ್ರಗ್ರಹಣದಿಂದಾಗಿ, ಈ ಮೂರು ದಿನಗಳಲ್ಲಿ ಬ್ರೇಕ್ ದರ್ಶನಗಳನ್ನು ರದ್ದುಗೊಳಿಸಲಾಗಿದೆ.

ನವೆಂಬರ್ 8 ರಂದು ಚಂದ್ರಗ್ರಹಣ ಇರುವುದರಿಂದ ಅಂದು ಕೂಡ ಸರ್ವದರ್ಶನ ಮಾತ್ರ ಇರುತ್ತದೆ. ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಗ್ರಹಣದ ದಿನಗಳಲ್ಲಿ ವಿರಾಮ, ವಿಶೇಷ ದರ್ಶನ, ಆರ್ಜಿತ ಸೇವೆಗಳನ್ನು ರದ್ದುಪಡಿಸಲು ನಿರ್ಧರಿಸಲಾಗಿದ್ದು, ಅದೇ ರೀತಿ ಗ್ರಹಣ ಸಮಯದಲ್ಲಿ ಅನ್ನಪ್ರಸಾದ ವಿತರಣೆಯನ್ನು ನಿಲ್ಲಿಸಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!