ಈಗಷ್ಟೇ 18 ಆದವರಿಗೂ ಮತದಾನಕ್ಕೆ ಅವಕಾಶ ಕೊಟ್ಟ ಚುನಾವಣಾ ಆಯೋಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ವರ್ಷ 18 ಪ್ರಾಯ ತುಂಬಿದವರಿಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ.

ಚುನಾವಣಾ ಆಯೋಗ ಗುಡ್‌ನ್ಯೂಸ್‌ ನೀಡಿದ್ದು, 2006 ರ ಜನವರಿ 1 ಮಾರ್ಚ್‌ 31ರ ನಡುವೆ ಜನಿಸಿದವರಿಗೂ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ಈಗಷ್ಟೇ 18 ವರ್ಷ ಆದವರಿಗೆ ಈಗ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ನೀಡದಿದ್ದರೆ ಅವರು ಮೊದಲ ಬಾರಿಗೆ ಮತ ಚಲಾಯಿಸಲು ಮುಂದಿನ ಚುನಾವಣೆಯವರೆಗೆ ಕಾಯಬೇಕಾಗುತ್ತದೆ. ಹೀಗಾಗಿ ಫಾರ್ಮ್ 6 ರ ನಿಬಂಧನೆಯ ಅಡಿಯಲ್ಲಿ ಅವಕಾಶ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರವೂ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಲು ಫಾರ್ಮ್ 6ರ ಅಡಿಯಲ್ಲಿ ಮುಂಗಡ ಅರ್ಜಿ ಸಲ್ಲಿಸುವ ಅವಕಾಶವಿದೆ. ಈ ಕುರಿತು ಮೊದಲ ಬಾರಿಗೆ ಮಾರ್ಚ್ 21 ರಂದು ವರದಿ ಮಾಡಿದಾಗ, ಸುಮಾರು 50,000 ಅರ್ಜಿಗಳು ಸಲ್ಲಿಕೆಯಾಗಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!