ಸೋಲಿನ ಸರದಾರರಾದ ಆರ್​ಸಿಬಿ ಪ್ಲೇಯರ್ಸ್: ಈ ಸೋಲಿನ ಹೊಣೆ ಹೊತ್ತಿದ್ದು ಯಾರು? ಕ್ಯಾಪ್ಟನ್ ಏನಂದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಅಲ್ಪ ಸೋಲು ಅನುಭವಿಸಿದೆ. ಮುಂಬೈ ಇಂಡಿಯನ್ಸ್ 15 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 199 ರನ್ ಗಳಿಸಿತು.

ಇದರಿಂದ ಆರ್‌ಸಿಬಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇದಕ್ಕೆ ಕಾರಣ ಆರ್‌ಸಿಬಿಯ ಹೀನಾಯ ಬೌಲಿಂಗ್. ಆರ್​ಸಿಬಿ ತಂಡದ ನಾಯಕ ಫಾಪ್ ಡುಪ್ಲೆಸಿಸ್ ಒದ್ದೆ ಪಿಚ್​ನ ದೂರಿದ್ದಾರೆ. ಇದರಿಂದ ನಮ್ಮ ಬೌಲರ್​ಗಳು ಎಡವಿದರು ಎಂದಿದ್ದಾರೆ.

ಗುರುವಾರ (ಏಪ್ರಿಲ್ 12) ನಡೆದ ಪಂದ್ಯದಲ್ಲಿ ಆರ್ ಸಿಬಿ ಉತ್ತಮ ಪ್ರದರ್ಶನ ನೀಡಿತು. ಫಾಪ್ ಡುಪ್ಲೆಸಿಸ್, ರಜತ್ ಪಾಟಿದಾರ್ ಮತ್ತು ದಿನೇಶ್ ಕಾರ್ತಿಕ್ ಅರ್ಧಶತಕ ಸಿಡಿಸಿ ತಂಡದ ಪರ ದಾಪುಗಾಲಿಟ್ಟರು. 20 ಓವರ್‌ಗಳ ಅಂತ್ಯಕ್ಕೆ ಆರ್‌ಸಿಬಿ 196 ರನ್ ಗಳಿಸಿತು. ಇದು ಸಣ್ಣ ಮೊತ್ತವಲ್ಲ. ಆದರೆ ಮುಂಬೈ ಇಂಡಿಯನ್ಸ್ ಆಟಗಾರರು ನೀರು ಕುಡಿದಷ್ಟೇ ಸುಲಭವಾಗಿ ರನ್ ಚೇಸ್ ಮಾಡುತ್ತಿದ್ದರು. ಆರ್‌ಸಿಬಿ ಬೌಲರ್‌ಗಳು ಉತ್ತಮವಾಗಿ ಪ್ರತಿನಿಧಿಸಿದ್ದರು.

ಪಿಚ್ ಒದ್ದೆ ಆಗಿರುವುದು ಪ್ರಮುಖ ಪಾತ್ರವಹಿಸುತ್ತದೆ ಅನ್ನೋದು ನಮಗೆ ಗೊತ್ತಿತ್ತು. ನಾವು 250+ ಸ್ಕೋರ್ ಮಾಡಬೇಕಿತ್ತು. 190 ಅನ್ನೋದು ಕೆಲವು ಸ್ಟೇಡಿಯಂಗಳಲ್ಲಿ ದೊಡ್ಡ ಮೊತ್ತ. ಆದರೆ, ವಾಂಖೆಡೆಯಲ್ಲಿ ಇದು ದೊಡ್ಡ ಮೊತ್ತವಲ್ಲ. ಇದು ತೀರಾ ಸಣ್ಣ ಮೊತ್ತ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!