ಶರದ್ ಪವಾರ್ ಬಣಕ್ಕೆ ಹೊಸ ಹೆಸರು ಘೋಷಿಸಿದ ಚುನಾವಣಾ ಆಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶರದ್ ಪವಾರ್ ಬಣವನ್ನು ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ ಎಂದು ಶರದ್ ಚಂದ್ರ ಪವಾರ್ ಎಂದು ಚುನಾವಣಾ ಆಯೋಗವು ಹೆಸರನ್ನು ನಿಗದಿಪಡಿಸಿದೆ.

ತಮ್ಮ ರಾಜಕೀಯ ಬಣಕ್ಕೆ ಮೂರು ಸಂಭಾವ್ಯ ಹೆಸರುಗಳು ಹಾಗೂ ಚಿನ್ಹೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಕೆಲವೇ ಹೊತ್ತಿನಲ್ಲಿ ಆಯೋಗ ತನ್ನ ನಿರ್ಧಾರವನ್ನು ತಿಳಿಸಿದೆ.

ಅಜಿತ್ ಪವಾರ್ ಬಣವೇ ‘ನಿಜವಾದ ಎನ್‌ಸಿಪಿ’ ಎಂದು ಚುನಾವಣಾ ಆಯೋಗ ಮಂಗಳವಾರ ಘೋಷಿಸಿದ ನಂತರ ಶರದ್ ಪವಾರ್ ಬಣಕ್ಕೆ ಅವರ ರಾಜಕೀಯ ಬಣಕ್ಕೆ ಹೊಸ ಹೆಸರುಗಳನ್ನು ಸಲ್ಲಿಸುವಂತೆ ಕೇಳಲಾಯಿತು.

ಆಯೋಗವು ಅಜಿತ್ ಪವಾರ್ ನೇತೃತ್ವದ ಗುಂಪಿಗೆ ಎನ್‌ಸಿಪಿ ಹೆಸರು ಹಾಗೂ ‘ಗಡಿಯಾರ’ದ ಚಿನ್ಹೆಯನ್ನು ನೀಡಿದೆ. ಫೆಬ್ರವರಿ 27 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯ ಉದ್ದೇಶಕ್ಕಾಗಿ ಈ ಹೆಸರನ್ನು ಇಡಲಾಗಿದೆ.

ಮೂಲಗಳ ಪ್ರಕಾರ, ಶರದ್ ಪವಾರ್ ಅವರ ಬಣವು ಮೂರು ಹೆಸರುಗಳನ್ನು ಪ್ರಸ್ತಾಪ ಮಾಡಿದ್ದು, ಶರದ್ ಪವಾರ್ ಕಾಂಗ್ರೆಸ್, ಮಿ ರಾಷ್ಟ್ರವಾದಿ, ಶರದ್ ಸ್ವಾಭಿಮಾನಿ ಎನ್ನುವ ಹೆಸರನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಅದರೊಂದಿಗೆ ‘ಟೀ ಕಪ್’, ‘ಸೂರ್ಯಕಾಂತಿ’ ಮತ್ತು ‘ಉದಯವಾಗುತ್ತಿರುವ ಸೂರ್ಯ’ನ ಚಿನ್ಹೆಯನ್ನು ಬಣ ನೀಡಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!