ಮಹಾ ಸಿಎಂ ಶಿಂಧೆ-ಉದ್ಧವ್ ಠಾಕ್ರೆ ಬಣಕ್ಕೆ ಹೊಸ ಹೆಸರು, ಚಿಹ್ನೆ ನೀಡಿದ ಚುನಾವಣಾ ಆಯೋಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉದ್ಧವ್ ಠಾಕ್ರೆ ನೇತೃತ್ವದ ಬಣಕ್ಕೆ ಚುನಾವಣಾ ಆಯೋಗವು ಸೋಮವಾರ ‘ಉರಿಯುವ ಟಾರ್ಚ್’ (Mashaal) ಅನ್ನು ಚುನಾವಣಾ ಚಿಹ್ನೆಯಾಗಿ ನೀಡಿದೆ. ಇನ್ನು ಠಾಕ್ರೆ ನೇತೃತ್ವದ ಪಕ್ಷಕ್ಕೆ ‘ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಎಂದು ಹೆಸರಿಡಲಾಗಿದೆ.

ಇತ್ತ ಏಕನಾಥ್ ಶಿಂಧೆ ಬಣವು ತನ್ನ ಚುನಾವಣಾ ಚಿಹ್ನೆಗೆ ಸಂಬಂಧಿಸಿದಂತೆ ಕಳುಹಿಸಿದ ಮೂರು ಸಲಹೆಗಳನ್ನು ಆಯೋಗವು ಸ್ವೀಕರಿಸಲಿಲ್ಲ. ಮಂಗಳವಾರ ಬೆಳಿಗ್ಗೆ 10 ಗಂಟೆಯೊಳಗೆ ಮೂರು ಚುನಾವಣಾ ಚಿಹ್ನೆಗಳನ್ನು ಕಳುಹಿಸುವಂತೆ ತಿಳಿಸಿದೆ.

ಏಕನಾಥ್ ಶಿಂಧೆ ನೇತೃತ್ವದ ಪಕ್ಷದ ಹೆಸರು ‘ಬಾಳಾಸಾಹೇಬ್ ಆಂಚಿ ಶಿವಸೇನೆ’ ಎಂದು ಆಯೋಗದ ಮಧ್ಯಂತರ ಆದೇಶದಲ್ಲಿ ತಿಳಿಸಲಾಗಿದೆ.

ಇನ್ನು ಅಕ್ಟೋಬರ್ 8 ರಂದು ಶಿವಸೇನೆಯ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನ ಚುನಾವಣಾ ಆಯೋಗವು ಸ್ಥಗಿತಗೊಳಿಸಿತ್ತು ಮತ್ತು ಠಾಕ್ರೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಗುಂಪುಗಳು ನವೆಂಬರ್ 3 ರಂದು ಮುಂಬೈನಲ್ಲಿ ನಡೆಯಲಿರುವ ಅಂಧೇರಿ (ಪೂರ್ವ) ಉಪಚುನಾವಣೆಯಲ್ಲಿ ಪಕ್ಷದ ಹೆಸರನ್ನ ಬಳಸದಂತೆ ನಿರ್ಬಂಧಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!