ಅವಳಿ ಮಗು ಪಡೆದ ನಯನತಾರಾ ದಂಪತಿಗೆ ಶಾಕ್ ಕೊಟ್ಟ ತಮಿಳುನಾಡು ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ ಮನೆಯಲ್ಲಿ ಸಂತಸ ಮನೆ ಮಾಡಿದ್ದೂ, ಆದರೆ ಈ ಸಂಭ್ರಮಕ್ಕೆ ತಮಿಳುನಾಡು ಸರ್ಕಾರ ಬ್ರೇಕ್ ಹಾಕಿದೆ.

ಹೌದು, ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಗು ಪಡೆದಿದ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ ಈ ಕುರಿತುಸಂತಸವನ್ನುಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಇದರ ಬೆನ್ನಲ್ಲೇ ಈ ಜೋಡಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವಾಗ ಭಾರತೀಯ ಬಾಡಿಗೆ ತಾಯ್ತನದ ಕಾನೂನು ಉಲ್ಲಂಘಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.ತಮಿಳುನಾಡು ಸರ್ಕಾರ ತನಿಖೆಗೆ ಆದೇಶಿಸಿದೆ.

ಈ ಕುರಿತು ತಮಿಳುನಾಡು ಆರೋಗ್ಯ ಸಚಿವರು ಮಾಹಿತಿ ನೀಡಿದ್ದು, ಭಾರತೀಯ ಬಾಡಿಗೆ ತಾಯ್ತನದ ನಿಯಮದ ಪ್ರಕಾರ 21 ವರ್ಷದಿಂದ 36 ವರ್ಷದೊಳಗಿನ ಮಹಿಳೆಯರು ಬಾಡಿಗೆ ತಾಯ್ತನ ಹೊಂದಲು ಅವಕಾಶವಿದೆ. ಆದರೆ ನಯನತಾರಾ ವಿಚಾರದಲ್ಲಿ ಕೆಲ ನಿಯಮ ಉಲ್ಲಂಘನೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಈ ಕುರಿತು ಸರ್ಕಾರ ತನಿಖೆಗೆ ಆದೇಶಿಸಿದೆ ಎಂದು ಮಾ ಸುಬ್ರಮಣಿಯನ್ ಹೇಳಿದ್ದಾರೆ.

ಭಾರತೀಯ ತಾಯ್ತನದ ನಿಯಮದ ಪ್ರಕಾರ, ವಾಣಿಜ್ಯ ಬಾಡಿಗೆ ತಾಯ್ತನಕ್ಕೆ ಅವಕಾಶವಿಲ್ಲ. ಅಂದರೆ ಸೆಲೆಬ್ರೆಟಿಗಳು, ಉದ್ಯಮಿಗಳು ಅಥವಾ ಯಾರೇ ಆದರೂ ಹಣ ನೀಡಿ ಬಾಡಿಗೆ ತಾಯ್ತನದ ಮಗು ಪಡೆಯಲು ಸಾಧ್ಯವಿಲ್ಲ. ಬಾಡಿಗೆ ತಾಯ್ತನದ ಮೂಲಕ ಮಗುವಿಗೆ ಜನ್ಮ ನೀಡುವ ಮಹಿಳೆ, ದಂಪತಿಗಳಿಂದ ಹಣ ಪಡೆಯುವಂತಿಲ್ಲ. ಈ ನಿಯವನ್ನು ನಯನತಾರಾ ಜೋಡಿ ಉಲ್ಲಂಘಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ವೈದ್ಯಕೀಯ ವೆಚ್ಚ, ವಿಮೆ, ಔಷಧಿ ವೆಚ್ಚ ಮಾತ್ರ ಭರಿಸಬೇಕು. ಇನ್ನುಳಿದಂತೆ ಯಾವುದೇ ಮೊತ್ತವನ್ನು ಬಾಡಿಗೆ ತಾಯ್ತನ ಮಹಿಳೆ ಪಡೆಯುವಂತಿಲ್ಲ. ದಂಪತಿಗಳು ನೀಡುವಂತಿಲ್ಲ. ಆದರೆ ನಯನತಾರಾ ಜೋಡಿ ಈ ನಿಯಮಗಳನ್ನು ಉಲ್ಲಂಘಿಸಿರುವುದಾಗಿ ಆರೋಪ ಕೇಳಿಬಂದಿದೆ. ಹೀಗಾಗಿ ತಮಿಳುನಾಡು ಸರ್ಕಾರ ತನಿಖೆಗೆ ಆದೇಶಿಸಿದೆ.

ಕಳೆದ ಜೂನ್‌ 9ರಂದಷ್ಟೇ ಮದುವೆ ಆಗಿದ್ದ ಖ್ಯಾತ ತಮಿಳು ನಟಿ ನಯತಾರಾ ಹಾಗೂ ಚಿತ್ರ ನಿರ್ದೇಶಕ ವಿಘ್ನೇಶ್‌ ಶಿವನ್‌ ದಂಪತಿ , ನಾಲ್ಕು ತಿಂಗಳಿಗೆ ಮಗು ಪಡೆದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!