ಕರಿಪುರ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳು ನಿರ್ಮಿಸುತ್ತಿವೆ ಸುಸಜ್ಜಿತ ಆಸ್ಪತ್ರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎರಡು ವರ್ಷಗಳ ಹಿಂದೆ ಕರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತದಲ್ಲಿ ಬದುಕುಳಿದವರು ಮತ್ತು ಮೃತರ ಕುಟುಂಬಗಳು 50 ಲಕ್ಷ ರೂ. ಸಂಗ್ರಹಿಸಿ ಆಸ್ಪತ್ರೆ ನಿರ್ಮಿಸಲಿದ್ದಾರೆ.

ಅಪಘಾತದ ಸ್ಥಳದ ಸಮೀಪವಿರುವ ಏಕೈಕ ಸರ್ಕಾರಿ ಸಾರ್ವಜನಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ದ ಬಳಿಯೇ ರಕ್ಷಣಾ ಕಾರ್ಯಾಚರಣೆ ನಡೆಸಿದವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದಾಗಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಮಲಬಾರ್ ಡೆವಲಪ್‌ಮೆಂಟ್ ಫೋರಂ (ಎಂಡಿಎಫ್) ಅಡಿಯಲ್ಲಿ ರೂಪುಗೊಂಡ ಕ್ರಿಯಾ ವೇದಿಕೆಯು ಅಪಘಾತದ ಎರಡನೇ ವಾರ್ಷಿಕೋತ್ಸವವಾದ ಆಗಸ್ಟ್ ೭ ರಂದು ಪಿಎಚ್‌ಸಿಗೆ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಲು ಜಿಲ್ಲಾ ವೈದ್ಯಾಧಿಕಾರಿ (ಡಿಎಂಒ) ಅವರೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಒಳರೋಗಿ ಸೌಲಭ್ಯ, ಔಷಧಾಲಯ ಮತ್ತು ಪ್ರಯೋಗಾಲಯ ಸೌಲಭ್ಯ ಹೊಂದಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!