ಸಹಾಯಕ ಅಧ್ಯಾಪಕಿಯ ಕೆಲಸಕ್ಕೆ ಕುತ್ತು ತಂದಿತು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ ಬಿಕಿನಿ ಫೋಟೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇನ್ಸ್‌ಟಾಗ್ರಾಮ್‌ನಲ್ಲಿ ತನ್ನ ಬಿಕಿನಿ ಫೋಟೊ ಹಾಕಿದ್ದನ್ನು ವಿರೋಧಿಸಿ ಪೋಷಕರೊಬ್ಬರು ದೂರು ನೀಡಿದ ಹಿನ್ನೆಲೆ ಕೋಲ್ಕತ್ತದ ಸಂತ ಕ್ಸೇವಿಯರ್ ವಿಶ್ವವಿದ್ಯಾನಿಲಯದ ಸಹಾಯಕ ಅಧ್ಯಾಪಕಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.

ವಿದ್ಯಾರ್ಥಿಯೊಬ್ಬರ ತಂದೆ ನೀಡಿದ ಲಿಖಿತ ದೂರಿನ ಬಳಿಕ ವಿಶ್ವವಿದ್ಯಾನಿಲಯ ತನ್ನನ್ನು ಕೆಲಸ ತ್ಯಜಿಸುವಂತೆ ಸೂಚಿಸಿತು ಎಂದು ಸಹಾಯಕ ಅಧ್ಯಾಪಕಿ ಆರೋಪಿಸಿದ್ದಾರೆ. ಆದರೆ, ವಿಶ್ವವಿದ್ಯಾನಿಲಯ ಈ ಆರೋಪಗಳನ್ನು ನಿರಾಕರಿಸಿದ್ದು, ಅವರೇ ಸ್ವಯಂ ಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿರುವುದಾಗಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!