ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಪತ್ರೆಯಿಂದ ಆಂಬುಲೆನ್ಸ್ ಕೊಡದ ಕಾರಣ ತಂದೆಯೊಬ್ಬರು ತಮ್ಮ ಮಗಳ ಶವವನ್ನು ಬೈಕ್‌ನಲ್ಲಿಟ್ಟುಕೊಂಡು ತೆರಳಿದ ಮನಕಲಕುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ದುಡ್ಡಿಲ್ಲದ ಕಾರಣ ಆಸ್ಪತ್ರೆ ಆಂಬುಲೆನ್ಸ್ ನೀಡಿಲ್ಲ ಹಾಗಾಗಿ ಅನಿವಾರ್ಯವಾಗಿ ಬೈಕ್‌ನಲ್ಲಿ ಹಿಂಬದಿ ಕುಳಿತು ತನ್ನ ಮಗಳ ಶವವನ್ನು ತೊಡೆ ಮೇಲೆ ಮಲಗಿಸಿಕೊಂಡು ಕಣ್ಣೀರಿಡುತ್ತಾ ತಂದೆ ಮನೆಯತ್ತ ಹೊರಟಿದ್ದಾರೆ.
ಶಹದೋಲ್‌ನ ಸರ್ಕಾರಿ ಆಸ್ಪತ್ರೆಯಲ್ಲಿ 13 ವರ್ಷದ ಮಗಳನ್ನು ಲಕ್ಷ್ಮಣ್ ಸಿಂಗ್ ಅಡ್ಮಿಟ್ ಮಾಡಿದ್ದರು. ಮಗಳು ಮಾಧುರಿ ಕುಡಗೋಲು ರಕ್ತಹೀನತೆಯಿಂದ ಮೃತಪಟ್ಟಿದ್ದು,ಲಕ್ಷ್ಮಣ್ ಬಳಿ ದುಡ್ಡಿರದ ಕಾರಣ ಆಂಬುಲೆನ್ಸ್ ನೀಡಲು ನಿರಾಕರಿಸಿದ್ದಾರೆ.
ಬರೋಬ್ಬರಿ 70ಕಿ.ಮೀ ದೂರದಲ್ಲಿರುವ ಊರಿಗೆ ಆಂಬುಲೆನ್ಸ್ ಕೊಡೋದಿಲ್ಲ, 15 ಕಿ.ಮೀ ಒಳಗೆ ಮನೆಯಿದ್ದಲ್ಲಿ ಮಾತ್ರ ಆಂಬುಲೆನ್ಸ್ ಸೇವೆ ದೊರೆಯುತ್ತದೆ ಎಂದು ಆಸ್ಪತ್ರೆ ಹೇಳಿದೆ. ವಿಧಿಯಿಲ್ಲದೆ ತಂದೆ 70 ಕಿ.ಮೀ ಇರುವ ತನ್ನೂರಿಗೆ ಮಗಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ತೆರಳಿದ್ದಾರೆ.